ಚೆಟ್ಟಳ್ಳಿ: ಅರಬ್ ದೇಶದಲ್ಲಿ ತಮ್ಮ ಜೀವನ ಕಟ್ಟಿಕೊಳ್ಳಲು ನೂರಾರು ಕನಸುಗಳೊಂದಿಗೆ ಏಳು ಸಾಗರ ದಾಟಿ ಮರಳುಗಾಡಿನಲ್ಲಿ ಬಂದ ಕರುನಾಡಿನ ಸಾವಿರಾರು ಯುವಕ, ಯುವತಿಯರಿಗೆ ಕೊಡಗು ಹಳೆ ವಿದ್ಯಾರ್ಥಿಗಳ ಸಂಘ ದುಬೈ ಮತ್ತು ಹೆಮ್ಮೆಯ ಯುಎಇ ಕನ್ನಡಿಗರು-ದುಬೈ ಇವರು ಇಂಟರ್ವ್ಯೂ ಗೈಡೆನ್ಸ್ ಮತ್ತು ಜಾಬ್ ಫೇರ್ ಕಾರ್ಯಗಾರ ಕಾರ್ಯಕ್ರಮವನ್ನು ಪರ್ಲ್ ಸಿಟಿ ಸೂಟ್ಸ್ ಹೋಟೆಲ್

ಸಭಾಂಗಣದಲ್ಲಿ ಏರ್ಪಡಿಸಿತ್ತು .
, ಕಾರ್ಯಕ್ರಮಕ್ಕೆ ಯುನೈಟೆಡ್ ಅರಬ್ ಎಮಿರೇಟ್ಸ್ ದೇಶದ ವಿವಿಧ ಎಮಿರೇಟುಗಳಿಂದ ನೂರಕ್ಕಿಂತಲೂ ಹೆಚ್ಚು ಕೆಲಸ ಹುಡುಕಲು ಬಂದ ಕನ್ನಡಿಗ ಜನರು ಪಾಲ್ಗೊಂಡಿದ್ದರು.
ನುರಿತ ತರಬೇತುದಾರರಿಂದ ಜಾಬ್ ಇಂಟರ್ವ್ಯೂ ಹೇಗೆ ಎದುರಿಸಬೇಕು, ಯಾವ ರೀತಿಯಲ್ಲಿ ಯಾವ ಯಾವ ಕಡೆಗಳಲ್ಲಿ ಕೆಲಸಕ್ಕೆ ಅರ್ಜಿ ಹಾಕಬೇಕು ಮುಂತಾದ ಹತ್ತು ಹಲವು ವಿಷಯದ ಬಗ್ಗೆ ಮಾಹಿತಿಯನ್ನು ಪಡೆದುಕೊಂಡರು.
ರಾಧಾ ಜೀವನ್ ಮುದಿಗೌಡೆರ್ ( ಸೀನಿಯರ್ ಎಚ್ ಆರ್ ಸ್ಪೆಷಲಿಸ್ಟ್/ಕನ್ಸಲ್ಟೆಂಟ್), ಶ್ರೀ ರಾಘವೇಂದ್ರ ಗಾಣಿಗ ( ಹೆಡ್ ಆಫ್ ಎಚ್ ಆರ್, ಸೀನಿಯರ್ ಎಚ್ ಆರ್ ಬಿಸಿನೆಸ್ ಪಾರ್ಟ್ನರ್,ಸೀನಿಯರ್ ಟ್ಯಾಲೆಂಟ್ ಅಕ್ಯೂಸಿಷನ್) ಮತ್ತು ಶ್ರೀ ರಘು ನಾಡಕರ್ಣಿ (ಸೀನಿಯರ್ ಮ್ಯಾನೇಜರ್-ಬ್ಯುಸಿನೆಸ್ ಡೆವಲಪ್ಮೆಂಟ್, ಅಪರೇಷನ್ಸ್ ಅಂಡ್ ಟ್ರೇನಿಂಗ್ ) ಆಗಮಿಸಿದ ಕೆಲಸ ಹುಡುಕುವರಿಗೆ ಪ್ರೊಜೆಕ್ಟರ್ ಮುಂತಾದ ಸಲಕರಣೆ ಉಪಯೋಗಿಸಿ ಬಹಳ ಉತ್ತಮ ರೀತಿಯಲ್ಲಿ ಸಲಹೆಯನ್ನು ನೀಡಿದರು.
, ಸಂದರ್ಶನ ಹೇಗೆ ಎದುರಿಸಬೇಕು, ಯಾವ ಯಾವ ಕಡೆಗಳಲ್ಲಿ ಕೆಲಸಗಳಿಗೆ ಹೇಗೆ ಇದರ ಬೇಕು ಸಲ್ಲಿಸಬೇಕು ಇತ್ಯಾದಿ ಹಲವು ಮಾಹಿತಿಗಳನ್ನು ನೀಡಿದರು.
ಕಾರ್ಯಕ್ರಮದ ಇನ್ನೊಂದು ಭಾಗವಾದ ಜಾಬ್ ಫೇರ್-೨೦೧೯ ರಲ್ಲಿ ರಿಕ್ರೂಟರ್ ಶ್ರೀ ಪ್ರಸನ್ನಾ ಮತ್ತು ಟೋನಿ ಮತ್ತು ಬೇರೆ ಕನ್ನಡಿಗ ವ್ಯಾಪರಸ್ಥರು ತಮ್ಮ ಕಂಪನಿಗಳಿಗೆ ೧೬ಕ್ಕಿಂತಲೂ ಹೆಚ್ಚು ಕನ್ನಡಿಗರಿಗೆ ಸ್ಥಳದಲ್ಲೇ ಜಾಬ್ ಆಫರ್ ನೀಡಿದಲ್ಲದೆ ಮುಂದಿನ ದಿನಗಳಲ್ಲಿ ಹೆಚ್ಚು ಹೆಚ್ಚು ಕನ್ನಡಿಗರಿಗೆ ಕೆಲಸಕೊಡಿಸುವ ಭರವಸೆಯನ್ನು ನೀಡಿದರು.
ಈ ಸಂದರ್ಭ ಸೆಂತಲ್, ಮಧು, ಶಶಿಧರ್, ಪಲ್ಲವಿ, ಮಮತಾ,ಅನಿತಾ ಇದ್ದರು.
No comments
Post a Comment