ನವದೆಹಲಿ : ಗೂಗಲ್ ಹಾಗೂ ಫೇಸ್ ಬುಕ್ ನಲ್ಲಿ ರಾಜಕೀಯ ಸಂಬಂಧಿ ಮತ್ತು ಪಕ್ಷದ ಜಾಹೀರಾತಿಗಾಗಿ ಫೆಬ್ರವರಿಯಿಂದ ಮೇ ತಿಂಗಳವರೆಗೆ 53 ಕೋಟಿ ರೂ. ವೆಚ್ಚ ಮಾಡಲಾಗಿದ್ದು, ಬಿಜೆಪಿಯೇ ಈ ಜಾಹೀರಾತಿನಲ್ಲಿ ಅತಿ ದೊಡ್ಡ ಮೊತ್ತದ ಪಾಲು ಹೊಂದಿದೆ ಎಂದು ಫೇಸ್ ಬುಕ್ ಆಡ್ ಲೈಬ್ರೈರಿ ವರದಿ ಹೇಳಿದೆ.
ಫೇಸ್ ಬುಕ್ ಆಡ್ ಲೈಬ್ರೈರಿ ವರದಿ ಪ್ರಕಾರ, ಫೆಬ್ರವರಿಯಿಂದ ಮೇ.15 ರ ವರೆಗೆ 1.21 ಲಕ್ಷ ಜಾಹೀರಾತು ನೀಡಿರುವ ಬಿಜೆಪಿ ಅದಕ್ಕಾಗಿ ಒಟ್ಟು 26.5 ಕೋಟಿ ರೂ. ಖರ್ಚು ಮಾಡಿದೆ. ಉಳಿದಂತೆ ಇದೇ ಅವಧಿಯಲ್ಲಿ ಗೂಗಲ್, ಯೂಟ್ಯೂಬ್ ಮತ್ತು ಇತರೆ ಸೈಟ್ ಗಳಲ್ಲಿ 14,837 ಜಾಹೀರಾತು ನೀಡಿದ್ದು, ಅದಕ್ಕಾಗಿ 27.36 ಕೋಟಿ ರೂ. ವೆಚ್ಚ ಮಾಡಲಾಗಿದೆ.
ಬಿಜೆಪಿ ಫೇಸ್ ಬುಕ್ ನಲ್ಲಿ 2,500 ಜಾಹೀರಾತು ನೀಡಿದ್ದು, 4,23 ಕೋಟಿ ರೂ.ವೆಚ್ಚ ಮಾಡಿದೆ. ಫೇಸ್ ಬುಕ್ ಪೇಜ್ ಕೂಡ ಇದರಲ್ಲಿ ಸೇರಿದೆ. ಗೂಗಲ್ ನಲ್ಲಿ ಜಾಹೀರಾತಿಗಾಗಿ ಬಿಜೆಪಿ 17 ಕೋಟಿ ರೂ. ಖರ್ಚು ಮಾಡಿದೆ. ಕಾಂಗ್ರೆಸ್ ಫೇಸ್ ಬುಕ್ ನಲ್ಲಿ 3,686 ಜಾಹೀರಾತು ನೀಡಿದ್ದು, 1.46 ಕೋಟಿ ರೂ.ವ್ಯಯಿಸಿದೆ. ಗೂಗಲ್ ನಲ್ಲಿ 2.71 ಕೋಟಿ ರೂ. ಕಾಂಗ್ರೆಸ್ ವೆಚ್ಚ ಮಾಡಿದೆ ಎಂದು ವರದಿ ಹೇಳಿದೆ.

No comments
Post a Comment