ಬೆಳ್ತಂಗಡಿ :- ತಾಲ್ಲೂಕಿನ ಪ್ರಸನ್ನ ಐ.ಟಿ.ಐ ಕಾಲೇಜಿನ ಒರ್ವ ವಿದ್ಯಾರ್ಥಿ ಗೆ ಎ.ಬಿ.ವಿ.ಪಿ ಗೂಂಡಗಳು ಹಲ್ಲೆ ನಡೆಸಿದ್ದು ವಿದ್ಯಾರ್ಥಿಯು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿತ್ತಾನೆ. ಈ
ಎ.ಬಿ.ವಿ.ಪಿ ದುರ್ಷ್ಕರ್ಮಿಗಳ ಬಂಧನಕ್ಕೆ ಒತ್ತಾಯಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಬೆಳ್ತಂಗಡಿ ವತಿಯಿಂದ ಬಸ್ಸು ನಿಲ್ದಾಣದ ಬಳಿ ಪ್ರತಿಭಟನೆ ನಡೆಸಿದ್ದು ಆದರೆ ಬೆಳ್ತಂಗಡಿ ಪೋಲಿಸರು ಏಕಾಏಕಿ ಉಪವಾಸ ನಿರತ ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್ ಮಾಡಿದ್ದು ಮಾತ್ರವಲ್ಲದೆ 9 ವಿದ್ಯಾರ್ಥಿ
ನಾಯಕರನ್ನು ಬಂಧಿಸಿ ಠಾಣೆಯಲ್ಲೂ ಹಲ್ಲೆ ನಡೆಸಿದ ಘಟನೆ ನಡೆದಿದೆ. ಅನ್ಯಾಯಕ್ಕೊಳಗಾದ ವಿದ್ಯಾರ್ಥಿಗೆ ನ್ಯಾಯ ಕೇಳಿದರೆ ತಪ್ಪೇ ಎಂದು ವಿದ್ಯಾರ್ಥಿಗಳು ಪ್ರಶ್ನಿಸುತ್ತಿದ್ದಾರೆ. ಇದನ್ನು ಕ್ಯಾಂಪಸ್ ಫ್ರಂಟ್ ತೀವ್ರವಾಗಿ ಖಂಡಿಸುತ್ತದೆ. ಶೀಘ್ರದಲ್ಲಿ ಠಾಣೆಯ ಮುಂಭಾಗ ಬೃಹತ್ ಪ್ರತಿಭಟನೆ ನಡೆಸಲಿದ್ದೇವೆ ಎಂದು ಕ್ಯಾಂಪಸ್ ಫ್ರಂಟ್ ಎಚ್ಚರಿಸಿವೆ.

No comments
Post a Comment