ವಿಜಯಪುರ: ಕರವೇ ರಾಜ್ಯ ಉಪಾಧ್ಯಕ್ಷೆ ಹಾಗೂ ಕಾಂಗ್ರೆಸ್ ನಾಯಕಿ ರೇಷ್ಮಾ ಪಡೇಕನೂರ (35) ಅವರನ್ನು ಹತ್ಯೆ ಮಾಡಿ ಕೊಲ್ಹಾರ ಬಳಿಯ ಕೃಷ್ಣಾ ನದಿ ಸೇತುವೆ ಬಳಿ ಎಸೆದಿರುವ ಘಟನೆ ಜರುಗಿದೆ. ಕೃತ್ಯದ ಬಳಿಕ ಹಂತಕರು ಪರಾರಿಯಾಗಿದ್ದು ಆರೋಪಿಗಳ ಬಂಧನಕ್ಕೆ ಪೊಲೀಸರು ತಂಡ ರಚಿಸಿದ್ದಾರೆ.
ಶುಕ್ರವಾರ ಮಧ್ಯಾಹ್ನ ಕೃಷ್ಣಾ ನದಿ ಸೇತುವೆ ಕೆಳಗೆ ಮಹಿಳೆಯೊಬ್ಬರ ಶವ ಪತ್ತೆಯಾಗಿತ್ತು. ಆದರೆ, ಮೃತ ಮಹಿಳೆ ಯಾರೆಂದು ತಕ್ಷಣ ತಿಳಿಯದೇ ಅನಾಮಧೇಯ ಶವ ಎಂದು ಭಾವಿಸಲಾಗಿತ್ತು. ಮಧ್ಯಾಹ್ನ 1.30ರ ಸುಮಾರಿಗೆ ಮಹಿಳೆಯ ಶವ ರೇಷ್ಮಾ ಪಡೇಕನೂರ ಅವರದ್ದು ಎಂದು ಗುರುತಿಸಲಾಯಿತು. ಹತ್ಯೆಗೆ ಹಣಕಾಸಿನ ವ್ಯವಹಾರವೇ ಕಾರಣ ಎಂದು ಮೃತಳ ಪತಿ ಖಾಜಾ ಬಂದೇನವಾಜ್ ಪಡೇಕನೂರು ಪೊಲೀಸರಿಗೆ ದೂರು ನೀಡಿದ್ದಾರೆ.
ಸೊಲ್ಲಾಪುರ ಮೂಲದ ಎಐಎಂಐಎಂ ಪಕ್ಷದ ಪ್ರಮುಖ ಎನ್ನಲಾದ ತೌಫಿಕ್ ಇಸ್ಮಾಯಿಲ್ ಶೇಖ್ ಉರ್ಫ್ ಫೈಲ್ವಾನ್ ತೌಫಿಕ್ ಎಂಬುವರಿಗೆ ರೇಷ್ಮಾ ಪಡೇಕನೂರ 12 ಲಕ್ಷ ರೂ.ಸಾಲ ನೀಡಿದ್ದು, ಕೊಟ್ಟ ಹಣವನ್ನು ಮರಳಿಸುವಂತೆ ಹಲವು ಬಾರಿ ಕೇಳಿದ್ದರು

No comments
Post a Comment