ಹೊಸದಿಲ್ಲಿ, ಮೇ 24: ಭಾರತದಲ್ಲಿ ಪ್ರತಿ ಬಾರಿ ಚುನಾವಣಾ ಫಲಿತಾಂಶ ಪ್ರಕಟವಾದಾಗ ಅಲ್ಪಸಂಖ್ಯಾತ ಸಮುದಾಯಗಳ, ಪ್ರಮುಖವಾಗಿ ಮುಸ್ಲಿಂ ಸಮುದಾಯದ ಎಷ್ಟು ಮಂದಿ ಸಂಸತ್ ಪ್ರವೇಶಿಸುತ್ತಾರೆಂಬುದು ಅಸಕ್ತಿಯ ವಿಚಾರವಾಗುತ್ತದೆ. ಗುರುವಾರ ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟವಾದಾಗಲೂ ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಇದೇ ವಿಚಾರ ಚರ್ಚಿಸಲು ಆರಂಭಿಸಿದ್ದರು.
ಸದ್ಯ ಲಭಿಸಿರುವ ಮಾಹಿತಿಯ ಪ್ರಕಾರ ದೇಶಾದ್ಯಂತ ಒಟ್ಟು 27 ಮುಸ್ಲಿಂ ಅಭ್ಯರ್ಥಿಗಳು ಈ ಚುನಾವಣೆಯಲ್ಲಿ ಗೆದ್ದಿದ್ದಾರೆ. ಈ ಸಂಖ್ಯೆ 2014ರ ಲೋಕಸಭಾ ಚುನಾವಣೆಗೆ ಹೋಲಿಸಿದಾಗ 5ರಷ್ಟು ಹೆಚ್ಚಾಗಿದೆ. ಕಳೆದ ಬಾರಿ ಒಟ್ಟು 22 ಮುಸ್ಲಿಂ ಸಂಸದರು ಆಯ್ಕೆಯಾಗಿದ್ದರು. ಗುರುವಾರ ಆಯ್ಕೆಯಾದ 27 ಹೊಸ ಮುಸ್ಲಿಂ ಸಂಸದರ ಪೈಕಿ ಆರು ಮಂದಿ ಮುಸ್ಲಿಂ ಪಕ್ಷಗಳಿಂದ ಆಯ್ಕೆಯಾದವರು. ಮೂವರು ಮುಸ್ಲಿಂ ಲೀಗ್ ನವರಾಗಿದ್ದರೆ, ಇಬ್ಬರು ಆಲ್ ಇಂಡಿಯಾ ಮಜ್ಲಿಸ್-ಇ-ಇತ್ತೆಹಾದುಲ್ ಮುಸ್ಲಿಮೀನ್ ಹಾಗೂ ಒಬ್ಬರು ಯುಡಿಎಫ್ ನವರಾಗಿದ್ದಾರೆ. ಮಮತಾ ಬ್ಯಾನರ್ಜಿಯ ತೃಣಮೂಲ ಕಾಂಗ್ರೆಸ್ ಪಕ್ಷದಿಂದ ಐದು ಮಂದಿ ಆಯ್ಕೆಯಾಗಿದ್ದರೆ, ನಾಲ್ಕು ಮಂದಿ ಕಾಂಗ್ರೆಸ್ ಪಕ್ಷ, ಹಾಗೂ ತಲಾ ಮೂವರು ಎಸ್‍ಪಿ, ಬಿಎಸ್‍ಪಿ ಹಾಗೂ ಜಮ್ಮು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್ ನಿಂದ ಆಯ್ಕೆಯಾಗಿದ್ದಾರೆ. ಎನ್‍ಸಿಪಿ, ಎಲ್‍ಜೆಪಿ ಹಾಗೂ ಸಿಪಿಎಂ ಪಕ್ಷಗಳ ತಲಾ ಒಬ್ಬರು ಮುಸ್ಲಿಂ ಅಭ್ಯರ್ಥಿ ಲೋಕಸಭೆ ಪ್ರವೇಶಿಸಿದ್ದಾರೆ.
ರಾಜ್ಯವಾರು ಹೇಳುವುದಾದರೆ, ಪಶ್ಚಿಮ ಬಂಗಾಳ ಮತ್ತು ಉತ್ತರ ಪ್ರದೇಶಗಳಲ್ಲಿ ತಲಾ ಆರು ಮಂದಿ ಮುಸ್ಲಿಂ ಸಂಸದರಿದ್ದರೆ, ಕೇರಳ ಮತ್ತು ಜಮ್ಮು ಕಾಶ್ಮೀರದಿಂದ ತಲಾ ಮೂವರು, ಅಸ್ಸಾಂ, ಬಿಹಾರದಿಂದ ತಲಾ ಇಬ್ಬರು ಹಾಗೂ ಲಕ್ಷದ್ವೀಪ, ಮಹಾರಾಷ್ಟ್ರ, ಪಂಜಾಬ್, ತಮಿಳು ನಾಡು ಮತ್ತು ತೆಲಂಗಾಣದಿಂದ ತಲಾ ಒಬ್ಬರು ಸಂಸದರಿದ್ದಾರೆ.
ರಾಜ್ಯವಾರು ಹೇಳುವುದಾದರೆ, ಪಶ್ಚಿಮ ಬಂಗಾಳ ಮತ್ತು ಉತ್ತರ ಪ್ರದೇಶಗಳಲ್ಲಿ ತಲಾ ಆರು ಮಂದಿ ಮುಸ್ಲಿಂ ಸಂಸದರಿದ್ದರೆ, ಕೇರಳ ಮತ್ತು ಜಮ್ಮು ಕಾಶ್ಮೀರದಿಂದ ತಲಾ ಮೂವರು, ಅಸ್ಸಾಂ, ಬಿಹಾರದಿಂದ ತಲಾ ಇಬ್ಬರು ಹಾಗೂ ಲಕ್ಷದ್ವೀಪ, ಮಹಾರಾಷ್ಟ್ರ, ಪಂಜಾಬ್, ತಮಿಳು ನಾಡು ಮತ್ತು ತೆಲಂಗಾಣದಿಂದ ತಲಾ ಒಬ್ಬರು ಸಂಸದರಿದ್ದಾರೆ.
ಆದರೆ 27 ಮುಸ್ಲಿಂ ಸಂಸದರು ಲೋಕಸಭೆಯ ಒಟ್ಟು ಸಂಖ್ಯಾಬಲದ ಕೇವಲ ಶೇ 4.97ರಷ್ಟು ಮಾತ್ರ ಆಗಿದ್ದಾರೆ. ಲೋಕಸಭೆಯಲ್ಲಿ ಗರಿಷ್ಠ, ಅಂದರೆ 49 ಮುಸ್ಲಿಂ ಸಂಸದರು 1980ರಲ್ಲಿದ್ದರು. ಕಾಂಗ್ರೆಸ್ ನೇತೃತ್ವದ ಯುಪಿಎ ಅಧಿಕಾರದಲ್ಲಿದ್ದ ಎರಡು ಅವಧಿಯಲ್ಲಿ ತಲಾ 30 ಹಾಗೂ 34 ಮುಸ್ಲಿಂ ಸಂಸದರಿದ್ದರು. 1952ರಲ್ಲಿ ಕನಿಷ್ಠ, ಅಂದರೆ 11 ಮುಸ್ಲಿಂ ಸಂಸದರಿದ್ದರು.

No comments
Post a Comment