ಸೋತರೂ ಸಜ್ಜನಿಕೆ ಪ್ರದರ್ಶಿಸಿ ನಗರಸಭಾ ಚುನಾವಣೆಯ ಅಭ್ಯರ್ಥಿಗಳಿಗೆ ಗೆಲುವಿನ ತಂತ್ರಗಾರಿಕೆ ರೂಪಿಸಿದ- ಆರ್.ಧ್ರುವನಾರಾಯಣ್ “

No comments

ಚುನಾವಣೆಯಲ್ಲಿ ಅಲ್ಪ ಮತದಿಂದ ಹಿನ್ನಡೆ ಹೊಂದಿದ್ದರೂ ಸದಾ ಜನರ ಕಷ್ಟ ಸುಖಗಳಿಗೆ ಸ್ಪಂದಿಸಿ ಜನರ ಮಧ್ಯೆ ಇರುತ್ತೇನೆ”
ನಂಜನಗೂಡು.ಮೇ.24 ನೆನ್ನೆ ನಡೆದ ಚಾಮರಾಜನಗರ ಲೋಕಸಭಾ ಚುನಾವಣೆಯ ಪಲಿತಾಂಶದಲ್ಲಿ ಅಲ್ಪ ಮತಗಳಿಂದ ಪರಾಜಯ ಹೊಂದಿದ್ದರೂ ಕ್ರೀಡಾಮನೋಭವದಿಂದ ಸ್ವೀಕರಿಸಿ ಸದಾ ಜನರ ಮಧ್ಯೆ ಇದ್ದು ಅವರ ಕಷ್ಟ ಸುಖಗಳಿಗೆ ಸ್ಪಂದಿಸುತ್ತೇನೆ ಸೋಲಿನಿಂದ ನಾನು ದೃತಿಗೆಡುವುದಿಲ್ಲ ಎಂದು ಪರಾಜಿತ ಮಾಜಿ ಸಂಸದ ಆರ್.ಧ್ರುವನಾರಾಯಣ್ ತಿಳಿಸಿದ್ದಾರೆ. ಚುನಾವಣೆ ಫಲಿತಾಂಶದ ನಂತರ ನಗರದ ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಗೃಹಕಛೇರಿ ಸುದ್ದಿಗಾರರೊಂದಿಗೆ ಅವರು ಮಾತನಾಡುತ್ತಿದ್ದರು. ಗೆಲುವಿನ ಅವಕಾಶವಿದ್ದ ನಮಗೆ ಈ ಚುನಾವಣೆಯಲ್ಲಿ ಅಲ್ಪ ಮತದಿಂದ ಸೋತಿದ್ದಕ್ಕೆ ಸೋಲಿನ ಜವಾಬ್ದಾರಿಯನ್ನು ನಾನೇ ಹೊರುತ್ತೇನೆ. ಚಾಮರಾಜನಗರದ 5 ವಿಧಾನಸಭಾ ಕ್ಷೇತ್ರಗಳಲ್ಲಿ ನನಗೆ ಹೆಚ್ಚಿನ ಮತಗಳು ಬಂದಿದ್ದರೂ ಗುಂಡ್ಲುಪೇಟೆ, ಚಾಮರಾಜನಗರ, ನಂಜನಗೂಡು ಕ್ಷೇತ್ರಗಳಲ್ಲಿ ಬಿಜೆಪಿಯ ಅಭ್ಯರ್ಥಿ ಹೆಚ್ಚು ಮತಗಳನ್ನು ಪಡೆದಿದ್ದರಿಂದ ನಮ್ಮ ನಿರೀಕ್ಷೆಯಷ್ಟು ಮತಗಳು ಬಾರದಿದ್ದಕ್ಕೆ ಬೇಸರ ವ್ಯಕ್ತ ಪಡಿಸಿದ ಅವರು, 5 ಲಕ್ಷ 66ಸಾವಿರದಷ್ಟು ಮತ ನೀಡಿದ ಮತದಾರರಿಗೆ ಮತ್ತು ಕಾರ್ಯಕರ್ತರುಗಳಿಗೆ, ಮುಖಂಡರುಗಳಿಗೆ ಈ ಸಂದರ್ಭದಲ್ಲಿ ಕೃತಜ್ಞತೆ ಸಲ್ಲಿಸಿದರು. ರಾಷ್ಟ್ರಮಟ್ಟದ ಚುನಾವಣೆ ಹಲವಾರು ವಿಷಯದ ಮೇಲೆ ಚುನಾವಣೆ ನಡೆಯುತ್ತದೆ, ಅಭಿವೃದ್ದಿ ನೋಡಿ ಮತಹಾಕುವಂತೆ ಮತದಾರರಲ್ಲಿ ಮನವಿ ಮಾಡಿದ್ದೆ ಆದರೆ ಅವರು ನೀಡಿದ ತೀರ್ಪಿಗೆ ತಲೆಬಾಗಿದ್ದೇನೆ ರಾಜ್ಯ ರಾಜಕಾರಣಕ್ಕೆ ಮರಳುವುದಿಲ್ಲ ಎಂದರು. ಈ ತಿಂಗಳ 29ರಂದು ನಡೆಯಲಿರುವ ನಗರಸಭಾ ಚುನಾವಣೆಗೆ ಸ್ಪರ್ಧಿಸಿರುವ ಎಲ್ಲಾ ವಾರ್ಡ್‍ಗಳ 31 ಅಭ್ಯರ್ಥಿಗಳೊಂದಿಗೆ ಸಭೆ ನಡೆಸಿ ಗೆಲುವಿನ ತಂತ್ರಗಾರಿಕೆ ಮತ್ತು ಮಾರ್ಗದರ್ಶನ ನೀಡಿ ನನ್ನ ಚುನಾವಣೆಯಲ್ಲಿ ಒಂದೊಂದು ಮತ ಎಷ್ಟು ಅಮೂಲ್ಯ ಎಂದು ಅರಿತಿದ್ದೀರಿ ಇದು ಸ್ಥಳೀಯ ಸಂಸ್ಥೆ ಚುನಾವಣೆ ಪ್ರತಿ ಮತಕ್ಕೂ ಬೆಲೆ ನೀಡಬೇಕೆಂದರು. ಮುಖಂಡರು ಧ್ರುವನಾರಾಯಣ್ ರವರು ಸೋತಿದ್ದರೂ ಸಜ್ಜನಿಕೆ ಪ್ರದರ್ಶನ ನೀಡಿದ್ದಕ್ಕೆ ಸಭೆಯಲ್ಲಿ ಅವರಿಗೆ ಅಭಿನಂದನೆ ವ್ಯಕ್ತವಾಯಿತು. ಮಾಜಿ ಶಾಸಕ ಕಳಲೆ ಕೇಶವಮೂರ್ತಿರವರು ಈ ಸಂದರ್ಭದಲ್ಲಿ ಮಾತನಾಡಿ ಆರ್.ಧ್ರುವನಾರಾಯಣ್ ರವರ ಸೋಲಿಗೆ ಕಣ್ಣೀರಿಟ್ಟರು. ಇಷ್ಟೊಂದು ಅಭಿವೃದ್ದಿ ಕೆಲಸಗಳನ್ನು ಮಾಡಿ ಜನರ ಮಧ್ಯೆ ಇದ್ದು ಅವರ ಕಷ್ಟ ಸುಖಗಳಿಗೆ ದಿನದ 24 ಘಂಟೆಗಳು ಸ್ಪಂದಿಸುತ್ತಿದ್ದ ಆರ್.ಧ್ರುವನಾರಾಯಣ್ ರವರಿಗೆ ನಾನು ಮಾಜಿ ಸಂಸದರು ಎಂದು ಹೇಳುವುದಕ್ಕೆ ದುಃಖವಾಗುತ್ತದೆ ಎಂದು ಕಣ್ಣಲ್ಲಿ ನೀರು ತುಂಬಿಕೊಂಡು ಮಾತನಾಡಲು ತೊದಲಿಸಿದಾಗ ಸಭೆಯಲ್ಲಿ ಮೌನ ಆವರಿಸಿತು. ನಂತರ 31 ವಾರ್ಡ್‍ಗಳ ಅಭ್ಯರ್ಥಿಗಳಿಗೆ ಮಾರ್ಗದರ್ಶನ ಹೇಳಿ ಇದೇ ಬಾನುವಾರ ಮಾಜಿ ಸಂಸದರಾದ ಆರ್,ಧ್ರುವನಾರಾಯಣ್ ರವರು ಮತ್ತು ಮುಖಂಡರುಗಳು ನಗರದ 31 ವಾರ್ಡಗಳಲ್ಲಿ ಪಾದಯಾತ್ರೆ ಮೂಲಕ ನಗರಸಭಾ ಚುನಾವಣೆಯ ಸಂಬಂಧ ಮತದಾರರಲ್ಲಿ ಮತಯಾಚನೆ ನಡೆಸಲಾಗುತ್ತದೆ ಹೆಚ್ಚಿನ ಸಂಖ್ಯೆಯಲ್ಲಿ ಎಲ್ಲರೂ ಆಯಾಯ ವಾರ್ಡ್‍ಗಳಲ್ಲಿ ಭಾಗವಹಿಸಿ ನಗರಸಭೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವಂತೆ ನೋಡಿಕೊಳ್ಳುವಂತೆ ತಿಳಿಸಿದರು. ಮುಖಂಡರುಗಳಾದ ಬ್ಲಾಕ್ ಅದ್ಯಕ್ಷ ಪಿ.ಶ್ರೀನಿವಾಸ್, ಎಸ್.ಸಿ ಬಸವರಾಜು, ಅಕ್ಬರ್ ಅಲಿಂ, ನಂದಕುಮಾರ್, ವಕೀಲ ನಾಗರಾಜಯ್ಯ, ಎಂ.ಶ್ರೀಧರ್, ಸಿ.ಎಂ. ಶಂಕರ್, ಮಡುವಿನಹಳ್ಳಿ ಶಂಕರಪ್ಪ, ಮರಿಸ್ವಾಮಿ, ಶ್ರೀರಾಂಪುರ ಮಹದೇವು, ಹಗಿನವಾಳು ಬಸವಣ್ಣ, 31 ವಾರ್ಡ್‍ನ ಅಭ್ಯರ್ಥಿಗಳು ಉಪಸ್ಥಿತರಿದ್ದರು.

No comments

Post a Comment