ಹಿರಿಯ ವಿದ್ಯಾರ್ಥಿಗಳಿಂದ ಜಾತಿ ನಿಂದನೆ: ವೈದ್ಯಕೀಯ ವಿದ್ಯಾರ್ಥಿನಿ ಆತ್ಮಹತ್ಯೆ

No comments

ನವದೆಹಲಿ: 'ಜಾತಿಯ ಕಾರಣಕ್ಕೆ ನನ್ನ ಮಗಳನ್ನು ಹಿರಿಯ ವಿದ್ಯಾರ್ಥಿಗಳು ಹೀನಾಯವಾಗಿ ನಿಂದಿಸಿದ್ದೇ ಅವಳ ಆತ್ಮಹತ್ಯೆಗೆ ಕಾರಣ' ಎಂದು ಮುಂಬೈನ ಬಿ.ವೈ.ಎಲ್.ನಾಯರ್ ಸರ್ಕಾರಿ ಆಸ್ಪತ್ರೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ವೈದ್ಯಕೀಯ ವಿದ್ಯಾರ್ಥಿನಿಯ ತಾಯಿ ನೀಡಿರುವ ಹೇಳಿಕೆ ದೇಶದ ಗಮನ ಸೆಳೆದಿದೆ. ನಾಯರ್ ಆಸ್ಪತ್ರೆಯಲ್ಲಿ ಹೌಸ್ ಸರ್ಜನ್ ಆಗಿ ಗೈನಕಾಲಜಿ (ಸ್ತ್ರೀರೋಗ) ಅಭ್ಯಾಸ ಮಾಡುತ್ತಿದ್ದ ಪಾಯಲ್ ಸಲ್ಮಾನ್ ತಡ್ವಿ ಅವರ ಶವ ಮೇ 22ರಂದು ಅವರ ಕೊಠಡಿಯಲ್ಲಿ ಪತ್ತೆಯಾಗಿತ್ತು.
ತಡ್ವಿಗೆ ಜಾತಿ ನಿಂದನೆಯಿಂದ ಮಾನಸಿಕ ಕಿರುಕುಳ ಕೊಡುತ್ತಿದ್ದ ಆರೋಪ ಎದುರಿಸುತ್ತಿರುವ ಹೇಮಾ ಅಹುಜಾ, ಭಕ್ತಿ ಮೆಹಾರ್ ಮತ್ತು ಅಂಕಿತಾ ಖಂಡಿಲ್‌ವಾಲ್ ಇದೀಗ ತಲೆ ಮರೆಸಿಕೊಂಡಿದ್ದಾರೆ. ಮೂವರು ಆರೋಪಿಗಳ ವೈದ್ಯಕೀಯ ಸದಸ್ಯತ್ವವನ್ನು ಮಹಾರಾಷ್ಟ್ರದ ವೈದ್ಯರ ಒಕ್ಕೂಟ ರದ್ದುಪಡಿಸಿದೆ ಎಂದು ಎಎನ್‌ಐ ಸುದ್ದಿಸಂಸ್ಥೆ ವರದಿ ಮಾಡಿದೆ.

No comments

Post a Comment