ಬೆಂಗಳೂರು, ಮೇ 03 : ನೈಋತ್ಯ ರೈಲ್ವೆ ಹಲವು ರೈಲುಗಳ ಸಂಚಾರವನ್ನು ರದ್ದುಗೊಳಿಸಿದೆ. ಮೇ 4 ರಿಂದ 31ರ ತನಕ ಹಲವು ರೈಲುಗಳ ಸಂಚಾರ ರದ್ದುಗೊಂಡಿದೆ. ಕೆಲವು ರೈಲುಗಳ ಸಂಚಾರ ಭಾಗಶಃ ರದ್ದಾಗಿದೆ.
ಬೈಯಪ್ಪನಹಳ್ಳಿಯಲ್ಲಿ ಯಾರ್ಡ್ ನವೀಕರಣ ಕಾಮಗಾರಿ ನಡೆಯುತ್ತಿದೆ. ಆದ್ದರಿಂದ, ನೈಋತ್ಯ ರೈಲ್ವೆಯ ಬೆಂಗಳೂರು ಡಿವಿಜನ್ ಹಲವು ರೈಲುಗಳ ಸಂಚಾರವನ್ನು ರದ್ದುಗೊಳಿಸಿ ಆದೇಶ ಹೊರಡಿಸಿದೆ.
ಮೇ 4 ರಿಂದ 31ರ ತನಕ ಬೆಂಗಳೂರು ಕಂಟೋನ್ಮೆಂಟ್-ವಿಜಯವಾಡ (56503/56504) ಪ್ಯಾಸೆಂಜರ್ ರೈಲು, ಬಾಣಸವಾಡಿ-ಹೊಸೂರು (06571/06572) ಪ್ಯಾಸೆಂಜರ್ ರೈಲು ಸೇವೆಯನ್ನು ರದ್ದು ಪಡಿಸಲಾಗಿದೆ.ಭಾಗಶಃ ರದ್ದುಗೊಂಡಿರುವ ರೈಲುಗಳು : ಮೇ 4ರ ನಂತರ ಬೆಂಗಳೂರು ನಗರ -ಆರಕ್ಕೋಣಂ (56262) ಪ್ಯಾಸೆಂಜರ್ ರೈಲು ಸೇವೆಯನ್ನು ಜೋಲಾರಪಟ್ಟೈ ಹಾಗೂ ಆರಕ್ಕೋಣಂ ನಡುವೆ ಭಾಗಶಃ ರದ್ದುಪಡಿಸಲಾಗಿದೆ. ರೈಲು ಬೆಂಗಳೂರಿನಿಂದ ಜೋಲಾರಪಟ್ಟೈ ತನಕ ಮಾತ್ರ ಸಂಚಾರ ನಡೆಸಲಿದೆ.

ಮೇ 5 ರ ನಂತರ ಆರಕ್ಕೋಣಂ-ಬೆಂಗಳೂರು ನಗರ (56261) ಪ್ಯಾಸೆಂಜರ್ ರೈಲು ಸಂಚಾರವನ್ನು ಆರಕ್ಕೋಣಂ ಹಾಗೂ ಜೋಲಾರಪಟ್ಟೈ ಮಧ್ಯೆ ಭಾಗಶಃ ರದ್ದು ಮಾಡಲಾಗಿದೆ.
ಮೇ 8, 15, 22 ಹಾಗೂ 29ರಂದು ಸಂಬಲ್ಬುರ-ಬಾಣಸವಾಡಿ (08301) ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ಕೃಷ್ಣರಾಜಪುರಂ-ಬಾಣಸವಾಡಿ ಮಧ್ಯೆ ರದ್ದು ಪಡಿಸಲಾಗಿದೆ. ಆದ್ದರಿಂದ, ರೈಲು ಕೃಷ್ಣರಾಜಪುರಂ ವರೆಗೆ ಮಾತ್ರ ಸಂಚಾರ ನಡೆಸಲಿದೆ.

No comments
Post a Comment