ನಿಲಯ ಮೇಲ್ವಿಚಾರಕ ತಾತ್ಕಾಲಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ 

No comments

ಮಡಿಕೇರಿ ಮೇ.22(ಕರ್ನಾಟಕ ವಾರ್ತೆ):-ಪ್ರಸಕ್ತ (2019-20) ಸಾಲಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ನಡೆಸುತ್ತಿರುವ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ಬಾಲಕರ ಹಾಗೂ ಬಾಲಕಿಯರ ವಿದ್ಯಾರ್ಥಿ ನಿಲಯಗಳಲ್ಲಿ ಖಾಲಿ ಇರುವ ನಿಲಯ ಮೇಲ್ವಿಚಾರಕ ಹುದ್ದೆಗಳನ್ನು ತಾತ್ಕಾಲಿಕವಾಗಿ ಗುತ್ತಿಗೆ ಆಧಾರದ ಮೇಲೆ ಆಯ್ಕೆ ಮಾಡಲು ಅರ್ಹ ಸರ್ಕಾರಿ ನಿವೃತ್ತ ಹಾಸ್ಟೆಲ್ ವಾರ್ಡನ್, ನಿವೃತ್ತ ಸಹ ಶಿಕ್ಷಕರು, ಬಿ.ಇಡಿ, ನಿವೃತ್ತ ಮೇಲ್ವಿಚಾರಕರಿಂದ ಅರ್ಜಿ ಆಹ್ವಾನಿಸಲಾಗಿದೆ. ಮಡಿಕೇರಿ ತಾಲ್ಲೂಕಿನ ಪಾರಾಣೆ, ಸಂಪಾಜೆ, ಮಡಿಕೇರಿ, ಮರಗೋಡು, ಭಾಗಮಂಡಲ, ಸೋಮವಾರಪೇಟೆ, ಶನಿವಾರಸಂತೆ, ಕೊಡ್ಲಿಪೇಟೆ, ಆಲೂರು ಸಿದ್ದಾಪುರ, ಕುಶಾಲನಗರ, ಸುಂಟಿಕೊಪ್ಪ ಮತ್ತು ವಿರಾಜಪೇಟೆ ತಾಲ್ಲೂಕಿನ ಗೋಣಿಕೊಪ್ಪಲು, ವಿರಾಜಪೇಟೆ, ಪೊನ್ನಂಪೇಟೆ, ಹುದಿಕೇರಿ, ಶ್ರೀಮಂಗಲ ಮತ್ತು ಬಿರುನಾಣಿ ಇಲ್ಲಿ ತಾತ್ಕಾಲಿಕವಾಗಿ ನಿಲಯದ ಮೇಲ್ವಿಚಾರಕರ ಕೆಲಸ ಕಾರ್ಯಗಳನ್ನು ನಿರ್ವಹಿಸಲು ಅರ್ಜಿಯನ್ನು ಅಗತ್ಯ ದಾಖಲಾತಿಗಳೊಂದಿಗೆ ಜಿಲ್ಲಾ ಅಧಿಕಾರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮಡಿಕೇರಿ ಇವರಿಗೆ ಮೇ, 31 ರೊಳಗೆ ಸಲ್ಲಿಸಬಹುದು. ಅರ್ಹತೆಗಳು: ನಿವೃತ್ತ ನೌಕರರ ವಿರುದ್ಧ ಇಲಾಖಾ ವಿಚಾರಣೆ ಕೇಸ್‍ಗಳು ಬಾಕಿ ಇರಬಾರದು, ಸರ್ಕಾರಿ ನಿವೃತ್ತ ಹಾಸ್ಟೆಲ್ ವಾರ್ಡನ್, ನಿವೃತ್ತ ಸಹ ಶಿಕ್ಷಕರು-ಬಿ.ಇಡಿ, ನಿವೃತ್ತ ಕಚೇರಿ ಮೇಲ್ವಿಚಾರಕರು ಮಾತ್ರ ಅರ್ಹರಾಗಿರುತ್ತಾರೆ, ನಿವೃತ್ತ ನೌಕರರು ದೇಹದಾಢ್ರ್ಯತೆ ಬಗ್ಗೆ ಜಿಲ್ಲಾ ಸರ್ಜನ್‍ರಿಂದ ದೃಢೀಕರಿಸಿದ ಪತ್ರವನ್ನು ಸಲ್ಲಿಸಬೇಕು, ನಿವೃತ್ತ ನೌಕರರು ಅವರ 63 ವರ್ಷ ತುಂಬುವವರೆಗೆ ಮಾತ್ರ ಮುಂದುವರೆಸಬಹುದಾಗಿದೆ, ಹುಟ್ಟಿದ ದಿನಾಂಕವನ್ನು ದೃಢೀಕರಿಸುವ ಪ್ರಮಾಣ ಪತ್ರದ ಪ್ರತಿ ಲಗತ್ತಿಸಬೇಕು, ಪ್ರತೀ ವರ್ಷ ಅವರ ನಡತೆ, ಕಾರ್ಯನಿರ್ವಹಣೆ, ಅರ್ಹತೆಯನ್ನು ಪರಿಗಣಿಸಿ ನವೀಕರಿಸಲಾಗುವುದು, ಅರ್ಜಿಯೊಂದಿಗೆ ನಿವೃತ್ತಿಯ ಕೊನೆಯ ಮಾಹೆಯ ವೇತನ ಪ್ರಮಾಣ ಪತ್ರ, ಹಾಲಿ ಪಡೆಯುತ್ತಿರುವ ನಿವೃತ್ತಿ ವೇತನದ ದೃಢೀಕೃತ ಪ್ರತಿಯನ್ನು ಸಲ್ಲಿಸುವುದು, ಗುತ್ತಿಗೆ ಆಧಾರದ ನೌಕರರು ವರ್ಷಕ್ಕೆ 15 ದಿವಸಗಳ ಸಾಂದರ್ಭಿಕ ರಜೆ ಮಾತ್ರ ಪಡೆಯಬಹುದು, ಸರ್ಕಾರಿ ಹಣ ದುರುಪಯೋಗಪಡಿಸಿದ್ದಲ್ಲಿ ವಸೂಲಾತಿ ಮಾಡಲಾಗುವುದು ಹಾಗೂ ಜಿಲ್ಲಾ ಸಮಿತಿಯು ವಿಧಿಸುವ ಇನ್ನಿತರ ಅರ್ಹತೆಗಳಿಗೆ ಒಳಪಟ್ಟಿರಬೇಕು. ಹೆಚ್ಚಿನ ಮಾಹಿತಿಗೆ ಜಿಲ್ಲಾ ಅಧಿಕಾರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ದೇವರಾಜು ಅರಸು ಭವನ, ಜನರಲ್ ತಿಮ್ಮಯ್ಯ ಕ್ರೀಡಾಂಗಣ, ಮ್ಯಾನ್ಸ್ ಕಾಂಪೌಂಡ್ ಹತ್ತಿರ ಮಡಿಕೇರಿ, ದೂರವಾಣಿ ಸಂಖ್ಯೆ 08272-225628 ಇವರನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದು ಎಂದು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಅವಿನ್ ಅವರು ತಿಳಿಸಿದ್ದಾರೆ .

No comments

Post a Comment