ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆಗಲ್ಲ : ರಾಹುಲ್ ಗಾಂಧಿ

No comments

ನವದೆಹಲಿ : ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲುತ್ತದೆ. ಮೋದಿ ಮತ್ತೆ ಪ್ರಧಾನಿಯಾಗುವುದಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿ ಹಾಗೂ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಐದು ವರ್ಷಗಳ ಹಿಂದೆ, ಮೋದಿ ಇನ್ನೂ 10-15 ವರ್ಷ ಆಡಳಿತ ನಡೆಸುತ್ತಾರೆ. ಅವರನ್ನು ಸೋಲಿಸುವುದು ಸಾಧ್ಯವೇ ಇಲ್ಲ ಎಂದು ಹೇಳುತ್ತಿದ್ದರು. ಅದೊಂದು ಪೊಳ್ಳು ವ್ಯವಸ್ಥೆ. ಇನ್ನು 10-20 ದಿನಗಳಲ್ಲಿಯೇ ಅದು ತಾನಾಗಿ ಪತನವಾಗಲಿದೆ ಎಂದು ರಾಹುಲ್ ಗಾಂಧಿ ಹೇಳಿದರು.
ನಾವು ನರೇಂದ್ರ ಮೋದಿಗಿಂತಲೂ ಚೆನ್ನಾಗಿ ಭಯೋತ್ಪಾದನೆಯ ಪಿಡುಗನ್ನು ನಿಭಾಯಿಸುತ್ತೇವೆ ಯುಪಿಎ ಅವಧಿಯಲ್ಲಿ ಸರ್ಜಿಕಲ್ ದಾಳಿಯು ವಿಡಿಯೋ ಗೇಮ್ ಗಳಲ್ಲಷ್ಟೇ ನಡೆದಿತ್ತು ಎಂದು ಹೇಳಿರುವ ಮೋದಿ, ಕಾಂಗ್ರೆಸ್ ನ್ನು ಅವಮಾನಿಸಿದ್ದಲ್ಲ, ಸೇನೆಯನ್ನೇ ಅವಮಾನಿಸಿದರು ಎಂದು ವಾಗ್ದಾಳಿ ನಡೆಸಿದ್ದಾರೆ.

No comments

Post a Comment