ರೈಲು ವಿಳಂಬದಿಂದ ನೀಟ್ ಪರೀಕ್ಷೆ ವಂಚಿತ ಅಭ್ಯರ್ಥಿಗಳಿಗೆ ಮೇ 20ಕ್ಕೆ ಮರುಪರೀಕ್ಷೆ
ಬೆಂಗಳೂರು, ಮೇ 7: ರೈಲು ವಿಳಂಬದಿಂದಾಗಿ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (ನೀಟ್) ಬರೆಯಲಾಗದ ರಾಜ್ಯದ ನೂರಾರು ವಿದ್ಯಾರ್ಥಿಗಳಿಗೆ ಮೇ 20ರ ಬೆಳಗ್ಗೆ 10ರಿಂದ 1ಗಂಟೆಯ ವರೆಗೆ ಮತ್ತೊಮ್ಮೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ.
ನೀಟ್ ಪರೀಕ್ಷೆ ವಂಚಿತ ವಿದ್ಯಾರ್ಥಿಗಳು ಮೇ 10ರ ಸಂಜೆ 5ಗಂಟೆಯ ಒಳಗಾಗಿ ರೈಲು ವಿಳಂಬದಿಂದ ಪರೀಕ್ಷೆ ಬರೆಯಲಾಗದ ಅಭ್ಯರ್ಥಿಗಳು ಅಗತ್ಯ ದಾಖಲೆಗಳ ಜತೆ ಮಾಹಿತಿಯನ್ನು ಕೆಳಕಂಡ ನಗರ ಸಂಯೋಜಕರಿಗೆ ನೀಡಬೇಕು ಎಂದು ಕೋರಲಾಗಿದೆ.
ಸಂಯೋಜಕರು: ಡಾ.ದಾಕ್ಷಾಯಿಣಿ ಕಣ್ಣ, ಹಾರ್ವೆಸ್ಟ್ ಇಂಟರ್‌ನ್ಯಾಷನಲ್ ಸ್ಕೂಲ್, ಕೊಡತಿ ಗ್ರಾಮ, ಕಾರ್ಮಲಾರಾಮ್ ಅಂಚೆ, ಸರ್ಜಾಪುರ ರಸ್ತೆ, ಬೆಂಗಳೂರು-560003, ಮೊಬೈಲ್ ಸಂಖ್ಯೆ-96118 09701, ಇಮೇಲ್ ವಿಳಾಸ principal@harvestinternationalschool.in.
ಶ್ರೀದೇವಿ ಎಸ್.ಎ., ಬಿಬಿಯುಎಲ್ ಜೈನ್ ವಿದ್ಯಾಲಯ, ನಂ.84, ಕೆಆರ್ ರಸ್ತೆ, ಶಂಕರಪುರಂ, ಬೆಂಗಳೂರು-560004, ಮೊಬೈಲ್ ಸಂಖ್ಯೆ-94480 87909, 080-22422936, ಇ-ಮೇಲ್ ವಿಳಾಸ principal.jv@gmail.com
ಗೌರಿ ಬಿ.ನಟರಾಜ ಜೆಎಸ್‌ಎಸ್ ಪಬ್ಲಿಕ್ ಸ್ಕೂಲ್ ನಂ.31, 15ನೆ ಮುಖ್ಯರಸ್ತೆ, 22ನೆ ಅಡ್ಡರಸ್ತೆ, ಬೆಂಗಳೂರು-560070, ಮೊಬೈಲ್ ಸಂಖ್ಯೆ-96866 77270, 080-2297 0131, ಇ-ಮೇಲ್ jss.bsk@gmail.com
ಮಂಜು ಬಾಲಸುಬ್ರಹ್ಮಣ್ಯಂ, ಸರ್ವೆ ನಂ-35/1 ಎ, ಸಾತನೂರ ಗ್ರಾಮ, ಬಾಗಲೂರು ಅಂಚೆ, ಬಳ್ಳಾರಿ ರಸ್ತೆ, ಜಾಲ ಹೋಬಳಿ ಬೆಂಗಳೂರು, ದೂರವಾಣಿ ಸಂಖ್ಯೆ 080-2972 4861/ 70/92/93 ಇ-ಮೇಲ್ principal @north.dpsbangalore.edu.in ಸಂಪರ್ಕಿಸಲು ಕೋರಲಾಗಿದೆ.
ಮರು ಪರೀಕ್ಷಾ ಅಭ್ಯರ್ಥಿಗಳಿಗೆ ಪ್ರತ್ಯೇಕ ಪ್ರವೇಶ ಪತ್ರ ನೀಡಲಾಗುವುದು. ನೀಟ್ ಮರು ಪರೀಕ್ಷಗೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಾಗಿ ನೀಟ್ ಸಂಸ್ಥೆಯ www.ntaneet.nic.in, www.nta.ac.in ಅನ್ನು ನೋಡಬಹುದು ಎಂದು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯ ಹಿರಿಯ ನಿರ್ದೇಶಕರ ಪ್ರಕಟನೆ ತಿಳಿಸಿದೆ.
No comments
Post a Comment