ಫಣಿ ಆರ್ಭಟಕ್ಕೆ 16 ಬಲಿ..!

No comments

ದೆಹಲಿ :ಒಡಿಶಾಗೆ ಅಪ್ಪಳಿಸಿರುವ ಫಣಿ ಚಂಡಮಾರುತದಿಂದ ಬಲಿಯಾದವರ ಸಂಖ್ಯೆ 16ಕ್ಕೆ ಏರಿಕೆಯಾಗಿದೆ. ವಿದ್ಯುತ್​ ಕಂಬಗಳು, ಮನೆಗಳು, ಗುಡಿಸಲುಗಳು, ಮರಗಳು ಧರೆಗುರುಳಿದ್ದು ಜನಜೀವನ ಅಸ್ತವ್ಯಸ್ಥವಾಗಿದೆ. ಅಲ್ಲದೇ ಒಡಿಶಾದ ಮುಖ್ಯಮಂತ್ರಿ ನವೀನ್ ಪಾಟ್ನಾಯಕ್​ ಆಗಿರುವ ಅನಾಹುತದ ಬಗ್ಗೆ ವೈಮಾನಿಕ ಸಮೀಕ್ಷೆ ನಡೆಸಿ ಮಾಹಿತಿ ಕಲೆ ಹಾಕಿದ್ದಾರೆ. ಇನ್ನು, ಪಶ್ಚಿಮ ಬಂಗಾಳಕ್ಕೂ ಪ್ರವೇಶಿಸಿರುವ ಫಣಿ ಚಂಡಮಾರುತದಿಂದ ಅಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ. ಆದ್ರೆ, ಕೆಲವು ಕಡೆ ಮಾತ್ರ ಮನೆಗಳು ಹಾಗೂ ಮರಗಳು ನೆಲಕ್ಕುರುಳಿವೆ. ಅಲ್ಲದೇ ಮುಂಜಾಗೃತ ಕ್ರಮವಾಗಿ ಸುಮಾರು 35 ಸಾವಿರ ಜನರನ್ನು ಮಿದ್ನಾಪುರ್ ಜಿಲ್ಲೆಯ ಪೂರ್ವ ಮತ್ತು ಪಶ್ಚಿಮ ಭಾಗಗಳ ನಿರಾಶ್ರಿತರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. ಇನ್ನು ಕೊಲ್ಕತ್ತಾ ಏರ್​ಪೋರ್ಟ್​ನಲ್ಲಿ ಸುಮಾರು 79 ವಿಮಾನಗಳ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ.

No comments

Post a Comment