ಬ್ರೆಜಿಲ್‌ನಲ್ಲಿ ಶೂಟೌಟ್‌: 11 ಮಂದಿ ದುರ್ಮರಣ

No comments

ರಿಯೋ ಡಿ ಜನೈರೋ: ಉತ್ತರ ಬ್ರೆಜಿಲ್‌ನ ಬಾರ್‌ವೊಂದರ ಮೇಲೆ ಭಾನುವಾರ ರಾತ್ರಿ ದುಷ್ಕರ್ಮಿಗಳ ಗುಂಪೊಂದು ಬಂದೂಕಿನಿಂದ ದಾಳಿ ನಡೆಸಿದ್ದು, ಕನಿಷ್ಠ 11 ಮಂದಿ ಮೃತಪಟ್ಟಿದ್ದಾರೆ.
ಬೆಲೆಮ್‌ ನಗರದಲ್ಲಿ ಭಾನುವಾರ ರಾತ್ರಿ ಈ ದುರ್ಘಟನೆ ನಡೆದಿದೆ ಎಂದು ಸಾರ್ವಜನಿಕ ಸುರಕ್ಷತಾ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯಲ್ಲಿ ಆರು ಮಹಿಳೆಯರು ಮತ್ತು ಐವರು ಪುರುಷರು ಅಸುನೀಗಿರುವುದಾಗಿ ಅಲ್ಲಿನ ಸ್ಥಳೀಯ ವೆಬ್‌ಸೈಟ್‌ 'ಜಿ1' ವರದಿ ಮಾಡಿದೆ.
ಬೈಕ್‌ನಲ್ಲಿ ಬಂದ ಏಳು ಮಂದಿ ದುಷ್ಕರ್ಮಿಗಳು ಬಾರ್‌ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿದರು. ನಂತರ ಎಲ್ಲರೂ ಸ್ಥಳದಿಂದ ಪಲಾಯನಗೊಂಡರು. ಗುಂಪಿನಲ್ಲಿದ್ದವರ ಪೈಕಿ ಒಬ್ಬನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಘಟನೆಗೆ ಕಾರಣವೇನು ಎಂಬುದರ ಬಗ್ಗೆ ಅಧಿಕಾರಿಗಳು ಈ ವರೆಗೆ ಏನನ್ನೂ ತಿಳಿಸಿಲ್ಲ. 

No comments

Post a Comment