ಐಪಿಎಸ್ ಅಧಿಕಾರಿಗೆ ಸೇರಿದ ಮನೆಯಲ್ಲಿ 1 ಕೋಟಿ ಮೌಲ್ಯದ ಡ್ರಗ್ಸ್ ಪತ್ತೆ

No comments

ನವದೆಹಲಿ: ಐಪಿಎಸ್​ ಅಧಿಕಾರಿಯೊಬ್ಬರು ಬಾಡಿಗೆ ನೀಡಿದ್ದ ಮನೆಯ ಮೇಲೆ ದಾಳಿ ನಡೆಸಿದ ನಾಕೋರ್ಟಿಕ್ಸ್​ ಕಂಟ್ರೋಲ್​ ಬ್ಯೂರೋ ಅಧಿಕಾರಿಗಳು ಸುಮಾರು 1 ಕೋಟಿ . ಮೌಲ್ಯದ ಮಾದಕ ದ್ರವ್ಯ ಪತ್ತೆ ಮಾಡಿದ್ದಾರೆ.
ಎನ್​ಸಿಬಿ ಅಧಿಕಾರಿಗಳು ಗ್ರೇಟರ್​ ನೋಯಿಡಾದ ಮನೆಯೊಂದರಲ್ಲಿ ಡ್ರಗ್ಸ್​ ತಯಾರಿಸಲಾಗುತ್ತಿದೆ ಎಂಬ ಮಾಹಿತಿ ಮೇಲೆ ದಾಳಿ ನಡೆಸಿ ಬಾರಿ ಪ್ರಮಾಣದ ಮಾದಕ ದ್ರವ್ಯ ಪತ್ತೆ ಮಾಡಿದ್ದಾರೆ.
ದಾಳಿ ನಡೆಸಿದ ಅಧಿಕಾರಿಗಳಿಗೆ 1,818 ಕೆ.ಜಿ. ಸ್ಯೂಡೋಫೆಡ್ರೈನ್ ಮಾದಕ ದ್ರವ್ಯ ಪತ್ತೆಯಾಗಿದೆ. ಇದರ ಮಾರುಕಟ್ಟೆ ಮೌಲ್ಯ ಸುಮಾರು ಒಂದು ಸಾವಿರ ಕೋಟಿ ರೂ. ಇದೆ.ಎನ್ನಲಾಗಿದೆ ಘಟನೆ ಸಂಬಂಧ ಇಬ್ಬರು ನೈಜೀರಿಯನ್​ ಪ್ರಜೆಗಳು ಮತ್ತು ಒಬ್ಬ ದಕ್ಷಿಣ ಆಫ್ರಿಕಾ ಪ್ರಜೆಯನ್ನು ಬಂಧಿಸಲಾಗಿದೆ.

No comments

Post a Comment