ಬೆಂಗಳೂರು.ಏ.16 : ನೆನಪಿರಲಿ ಪ್ರೇಮ್ವೃತ್ತಿ ಬದುಕಿನ 25 ನೇ ಸಿನಿಮಾ 'ಪ್ರೇಮಂ ಪೂಜ್ಯಂ'. ಈಗಾಗಲೇ ಚಿತ್ರದ ಕೆಲಸಗಳು ಶುರುವಾಗಿದ್ದು, ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳು ಮೂಡಿವೆ. ಈ ಮೂಲಕ ನವ ನಿರ್ದೇಶಕ ರಾಘವೇಂದ್ರ ವಿಭಿನ್ನವಾದ ಪ್ರೇಮಕಥೆಯನ್ನು ಹೇಳಲಿದ್ದಾರೆ.ಆಗಿನಿಂದಲೇ ಚಿತ್ರದ ಬಗ್ಗೆ ಕುತೂಹಲ ಮೂಡಿಸುತ್ತಿತ್ತು. ಇನ್ನು ಚಿತ್ರಕ್ಕೆ ನಾಯಕಿ ಯಾರೆಂಬುದು ಇನ್ನೂ ತಿಳಿದಿರಲಿಲ್ಲ. ಆದರೆ ಇದೀಗ ಬಂದಿರುವ ಮಾಹಿತಿಗಳ ಪ್ರಕಾರ ಐಂದ್ರಿತಾ ರೇ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.ಅಂದ ಹಾಗೆ 'ನೆನಪಿರಲಿ' ಪ್ರೇಮ್ ಹಾಗೂ ಐಂದ್ರಿತಾ 'ಅತಿ ಅಪರೂಪ' ಹಾಗೂ 'ಚೌಕ' ಚಿತ್ರಗಳಲ್ಲಿ ನಟಿಸಿದ್ದರು. ಇದು ಈ ಜೋಡಿಯ ಮೂರನೇಯ ಸಿನಿಮಾವಾಗಿದ್ದು, ಇದೊಂದು ರೆಗ್ಯೂಲರ್ ಫಾರ್ಮಾಟ್ ನಿಂದ ಹೊರಗಿರುವ ಸಿನಿಮಾವಾಗಿದೆ.
ಚಿತ್ರದಲ್ಲಿ ಪ್ರೇಮ್ ನಾಲ್ಕು ಶೇಡ್ ನ ಪಾತ್ರ ಮಾಡುತ್ತಿದ್ದು ಚಿತ್ರದ ಬಗ್ಗೆ ಹೆಚ್ಚೇನು ಬಿಟ್ಟು ಕೊಟ್ಟಿಲ್ಲ. ಇನ್ನು ತಮ್ಮ 25ನೇ ಸಿನಿಮಾ ಸ್ವಲ್ಪ ವಿಭಿನ್ನವಾಗಿರಬೇಕೆಂದು ಸಿನಿಮಾ ನಿರ್ದೇಶನದ ಹೊಣೆಯನ್ನು ಹೊಸ ನಿರ್ದೇಶಕರಿಗೆ ಕೊಟ್ಟಿದ್ದಾರೆ ಪ್ರೇಮ್.

No comments
Post a Comment