ಏಪ್ರಿಲ್ ೧೫ ರಂದು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ

No comments

ಬೆಂಗಳೂರು, ಎ.12: ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಎ.15ರಂದು(ಸೋಮವಾರ) ಪ್ರಕಟವಾಗಲಿದೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕಿ ಸಿ.ಶಿಖಾ ತಿಳಿಸಿದರು.
ಈ ಹಿಂದೆ ಮಾಧ್ಯಮಗಳಲ್ಲಿ ಎ.17ರಂದು ಫಲಿತಾಂಶ ಪ್ರಕಟವಾಗಲಿದೆ ಎಂದು ತಪ್ಪು ಮಾಹಿತಿ ಪ್ರಕಟವಾಗಿತ್ತು. ಮೌಲ್ಯಮಾಪನದ ಬಳಿಕ ಅಂಕಗಳನ್ನು ಆನ್‌ಲೈನ್ ಮೂಲಕ ಸರ್ವರ್‌ಗೆ ಸೇರಿಸುವ ಕ್ರಮದಿಂದಾಗಿ ಈ ಬಾರಿ ಫಲಿತಾಂಶವನ್ನು ಬೇಗವಾಗಿ ನೀಡಲು ಸಾಧ್ಯವಾಗಿದೆ ಎಂದು ತಿಳಿಸಿದರು.
ಸಾಮಾನ್ಯವಾಗಿ ಸಿಇಟಿ ಫಲಿತಾಂಶ ಬಂದ ಬಳಿಕವೇ ದ್ವಿತೀಯ ಪಿಯು ಫಲಿತಾಂಶ ಪ್ರಟಿಸಲಾಗುತ್ತದೆ. ಪಿಯು ಪರೀಕ್ಷೆ ಫಲಿತಾಂಶದ ಒತ್ತಡ ವಿದ್ಯಾರ್ಥಿಗಳ ಮೇಲೆ ಆಗಬಾರದು ಎಂಬ ಕಾರಣಕ್ಕಾಗಿ ಪರಸ್ಪರ ಹೊಂದಾಣಿಕೆಯ ಮೇಲೆ ಹಲವು ವರ್ಷಗಳಿಂದ ಈ ವಿಧಾನ ಅನುಸರಿಸಿಕೊಂಡು ಬರಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.

No comments

Post a Comment