ಒಂದರ ಬದಲು 5 ವಿವಿಪ್ಯಾಟ್ ಗಳನ್ನು ಪರಿಶೀಲಿಸಿ: ಚು.ಆಯೋಗಕ್ಕೆ ಸುಪ್ರೀಂ ಕೋರ್ಟ್ ಸೂಚನೆ
ಹೊಸದಿಲ್ಲಿ, ಎ.8: ಲೋಕಸಭಾ ಚುನಾವಣೆಗೆ ಇನ್ನೇನು ಕೆಲದಿನಗಳಿರುವಂತೆಯೇ ಮತ ಎಣಿಕೆಯ ಸಂದರ್ಭ ಮತಗಳ ತಾಳೆ ನೋಡಲು ಒಂದರ ಬದಲು 5 ವಿವಿಪ್ಯಾಟ್ ಗಳನ್ನು ಪರಿಶೀಲಿಸಬೇಕು ಎಂದು ಸುಪ್ರೀಂ ಕೋರ್ಟ್ ಚುನಾವಣಾ ಆಯೋಗಕ್ಕೆ ಸೂಚನೆ ನೀಡಿದೆ.
50 ವಿವಿಪ್ಯಾಟ್ ಗಳ ಎಣಿಕೆಯಿಂದ ಫಲಿತಾಂಶ ಪ್ರಕಟದಲ್ಲಿ 6 ದಿನಗಳು ತಡವಾದರೂ ಸಮಸ್ಯೆಯಿಲ್ಲ ಎಂದು 21 ವಿಪಕ್ಷಗಳ ನಾಯಕರು ತಿಳಿಸಿದ ನಂತರ ಸುಪ್ರೀಂ ಕೋರ್ಟ್ ಈ ಸೂಚನೆ ನೀಡಿದೆ.
No comments
Post a Comment