ಮೈಸೂರು, ಏ.18- ಸಾಂಸ್ಕøತಿಕ ನಗರಿ ಮೈಸೂರಿನಲ್ಲಿ ಬೆಳಗ್ಗಿನಿಂದಲೇ ಮತದಾರರು ತಮ್ಮ ಹಕ್ಕು ಚಲಾಯಿಸಲು ಸಾಲುಗಟ್ಟಿ ನಿಂತ ದೃಶ್ಯ ಕಂಡು ಬಂದಿತು. ಸಾಲು ಸಾಲು ರಜೆ ಇರುವ ಹಿನ್ನೆಲೆಯಲ್ಲಿ ಬೇಗ ಮತದಾನ ಮುಗಿಸಿ ಪ್ರವಾಸಕ್ಕೆ ತೆರಳುವ ಸಲುವಾಗಿ ಮತಗಟ್ಟೆಗಳಲ್ಲಿ ಮತದಾರರು ಭರದಿಂದ ಮತದಾನ ಮಾಡುತ್ತಿದ್ದರು.
ವಿಜಯನಗರದ 108ರ ಮತದಾನ ಕೇಂದ್ರದಲ್ಲಿ ಮೈತ್ರಿ ಅಭ್ಯರ್ಥಿ ಕಾಂಗ್ರೆಸ್‍ನ ವಿಜಯ್‍ಶಂಕರ್ ಅವರು ತಮ್ಮ ಹಕ್ಕನ್ನು ಚಲಾಯಿಸಿದರು. ಶಾಸಕರಾದ ರಾಮದಾಸ್ ಅವರು ಸೆಂಟ್ ಮೇರಿಸ್ ಶಾಲೆಯಲ್ಲಿ, ನಾಗೇಂದ್ರ ಕೆ.ಜಿ.ಕೊಪ್ಪಲಿನ ಮತಕೇಂದ್ರದಲ್ಲಿ ಹಕ್ಕು ಚಲಾಯಿಸಿದರು. ಚಾಮರಾಜನಗರದ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ಪ್ರಸಾದ್ ಅವರು ಮಹಾಜನ ಕಾಲೇಜಿನಲ್ಲಿ ಮತಹಾಕಿದರು.
ರಾಜ ವಂಶಸ್ಥರಾದ ಯದುವೀರ್ ದಂಪತಿ ಶ್ರೀಕಾಂತ ಶಾಲೆಯಲ್ಲಿ ಮತದಾನ ಮಾಡಿದರು. ಅನಂತರ ಯದುವೀರ್ ಅವರು ಪತ್ರಕರ್ತರೊಂದಿಗೆ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆ ಆರಂಭವಾಗಿದ್ದೆ ಚಾಮರಾಜ ಒಡೆಯರ್ ಅವರ ಕಾಲದಲ್ಲಿ. ಮೊದಲಿಗೆ ಮೈಸೂರಿನಲ್ಲಿ ಪ್ರಜಾಪ್ರತಿನಿಧಿ ಸಭೆ ಮೂಲಕ ಆರಂಭಿಸಿದ್ದರು. ಹಾಗಾಗಿ ಇಂದು ನಾನು ಮತ ಚಲಾಯಿಸುತ್ತಿರುವುದು ಸಂತಸ ತಂದಿದೆ ಎಂದರು.

No comments
Post a Comment