ನಕ್ಸರಲ್ಲ:ಕೊಡಗು ಎಸ್ಪಿ ಸ್ಪಷ್ಟನೆ

No comments

ನಕ್ಸಲರಲ್ಲ - ಕೊಡಗು  ಎಸ್ಪಿ ಸ್ಪಷ್ಟನೆ.
ಕೊಡಗು ಜಿಲ್ಲೆಯ ಯವಕಪಾಡಿಗೆ ಶಂಕಿತ ನಕ್ಸಲರು  ಬಂದು ಮನೆಯೊಂದರಿಂದ ಮೊಬೈಲ್, ಅಕ್ಕಿಯನ್ನು ಕೊಂಡೊಯ್ದಿದ್ದಾರೆ ಎಂಬ ಮಾಹಿತಿಯನ್ವಯ ಕೊಡಗು ಪೊಲೀಸರು ಗ್ರಾಮಕ್ಕೆ ತೆರಳಿ ಪರಿಶೀಲಿಸಿದ್ದಾರೆ. ಈ ಸಂದಭ೯ ಯಾರೋ ಅಪರಿಚಿತರು ಇಲ್ಲಿಗೆ ಬಂದಿದ್ದು, ನಕ್ಸರಲ್ಲ ಎಂದು ಪೊಲೀಸ್ ವಿಚಾರಣೆ ಸಂದಭ೯ ತಿಳಿದುಬಂದಿದೆ.
ಪೊಲೀಸರು ಯವಕಪಾಡಿ  ಗ್ರಾಮದ ಮನೆಯ ಮಹಿಳೆಗೆ ನಕ್ಸಲರ ಪೋಟೋ ತೋರಿಸಿದಾಗ ತನ್ನ ಮನೆಗೆ ಬಂದಿದ್ದ ವ್ಯಕ್ತಿಗಳಿಗೂ ನಕ್ಸಲರ ಭಾವಚಿತ್ರಕ್ಕೂ ಹೋಲಿಕೆಯಾಗಿಲ್ಲ. ನಕ್ಸಲರು ಧರಿಸುವ ಸಮವಸ್ತ್ರಗಳನ್ನು ಮನೆಗೆ ಬಂದ ವ್ಯಕ್ತಿಗಳು ಧರಿಸಿರಲಿಲ್ಲ. ಅಂತೆಯೇ ಯಾವುದೇ ಆಯುಧಗಳನ್ನೂ ಈ ವ್ಯಕ್ತಿಗಳು ಹೊಂದಿರಲಿಲ್ಲ ಎಂದಿದ್ದಾರೆ. ಪ್ಯಾಂಟ್ ಶಟ್೯ ಮತ್ತು ಚೂಡಿದಾರ್ ಧರಿಸಿದ್ದಾಗಿ ಹೇಳಿದ್ದಾರೆ. ನಕ್ಸಲರು ಧರಿಸಿರುವ ಸಮವಸ್ತ್ರ ಧರಿಸಿರುವುದಿಲ್ಲ. 
ಅಕ್ಕಪಕ್ಕದ ಮನೆಯವರನ್ನು ವಿಚಾರಿಸಿಕೊಂಡು ವ್ಯಕ್ತಿಗಳು ಸಾಗಿದ್ದ ಹಾದಿಯಲ್ಲಿಯೇ ಪೊಲೀಸರು ಹೋದ ಸಂದಭ೯ ಸುಮಾರು 80 ಮೀಟರ್ ದೂರದಲ್ಲಿ ಮಹಿಳೆಯಿಂದ ಕಸಿಯಲಾಗಿದ್ದ ಮೊಬೈಲ್ ಬಿದ್ದಿದ್ದು ಕಂಡುಬಂದಿದೆ. ಅದೇ ದಾರಿಯಲ್ಲಿ ಸಾಗಿದಾಗ ಆ ಹಾದಿ ಅಂತ್ಯಗೊಂಡಿದ್ದು ಮುಂದೆ ಯಾವುದೇ ದಾರಿಯೂ ಇಲ್ಲದೇ ಇರುವುದು ಪತ್ತೆಯಾಗಿದೆ.
ತನ್ನ ಮನೆಯಿಂದ 15 ಕೆ.ಜಿ. ಅಕ್ಕಿಯನ್ನು ತೆಗೆದುಕೊಂಡು ಹೋಗಿದ್ದಾಗಿ ಹೇಳಿದ ವ್ಯಕ್ತಿಯನ್ನು ವಿಚಾರಣೆಗೊಳಪಡಿಸಿದ ಸಂದಭ೯ ಆ ಮನೆಯಿಂದ ಯಾವುದೇ ಅಕ್ಕಿಯನ್ನು ತೆಗೆದುಕೊಂಡ ಹೋದ ಬಗ್ಗೆ ಯಾವುದೇ ಕುರುಹು ಕಂಡುಬಂದಿಲ್ಲ. ಸ್ಥಳೀಯರನ್ನು ವಿಚಾರಿಸಿದಾಗಲೂ ಯಾರೂ ಸಹ ಅಕ್ಕಿಯನ್ನು ತೆಗೆದುಕೊಂಡು ಹೋಗಿರುವುದನ್ನು ನೋಡಿಲ್ಲವೆಂದು ತಿಳಿಸಿದ್ದಾರೆ.
ಹೀಗಾಗಿ, ಯವಕಪಾಡಿ ಗ್ರಾಮದಲ್ಲಿ ಕಾಯಾ೯ಚರಣೆ ಕೈಗೊಂಡ ಪೊಲೀಸರು ಮತ್ತು ನಕ್ಸಲ್ ನಿಗ್ರಹ ಪಡೆಗೆ ಮತ್ತು ನಕ್ಸಲ್ ನಿಗ್ರಹ ದಳದವರಿಗೆ ಈ ವ್ಯಾಪ್ತಿಯಲ್ಲಿ ನಕ್ಸಲರ ಸುಳಿವು ಕಂಡುಬಂದಿಲ್ಲ ಎಂದು ಕೊಡಗು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ.ಸುಮನ್ ಪನ್ನೇಕರ್ ನೀಡಿರುವ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

No comments

Post a Comment