ಹುಲಿದಾಳಿಗೆ ಕರು ಬಲಿ..

No comments

ಹುಲಿದಾಳಿಗೆ ಕರು ಬಲಿ : ದಕ್ಷಿಣ ಕೊಡಗಿನ ಪರಕಟಗೇರಿಯಲ್ಲಿ ಘಟನೆ
ಮಡಿಕೇರಿ ಏ.೩ : ಹುಲಿ ದಾಳಿ ನಡೆಸಿ ಕರುವನ್ನು ಕೊಂದು ಹಾಕಿರುವ ಘಟನೆ ದಕ್ಷಿಣ ಕೊಡಗಿನ ಪರಕಟಗೇರಿ ಗ್ರಾಮದಲ್ಲಿ ನಡೆದಿದೆ.
ಎಮ್ಮೆಯ ಕರುವಿನ ಹಿಂಭಾಗದ ಒಂದಷ್ಟು ಭಾಗವನ್ನು ತಿಂದಿರುವ ಹುಲಿ ಸ್ಥಳದಿಂದ ಕಾಲ್ಕಿತ್ತಿದೆ.

ಅಲ್ಲಿನ ಕಾಳಿಮಾಡ ಸುರೇಶ್ ಎಂಬವರಿಗೆ ಸೇರಿದ ಕರುವನ್ನು ಮೇಯಲು ಬಿಟ್ಟಿದ್ದ ಸಂದರ್ಭ ದಾಳಿ ನಡೆಸಿ ಕೊಂದು ಹಾಕಿದೆ. ಕಳೆದ ೬ ತಿಂಗಳಿನಿಂದ ಈ ಭಾಗದಲ್ಲಿ ಹುಲಿ ಓಡಾಡುತ್ತಿದ್ದು, ಅರಣ್ಯ ಇಲಾಖೆ ಸೂಕ್ತ ಕ್ರಮಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಸ್ಥಳಕ್ಕೆ ಶ್ರೀಮಂಗಲ ವನ್ಯಜೀವಿ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

No comments

Post a Comment