ಕುಡಿಯುವ ನೀರು ತೆರಿಗೆ ಪಾವತಿಸಲು , ಮಡಿಕೇರಿ ನಗರಸಭೆ ಸೂಚನೆ

No comments

ಕುಡಿಯುವ ನೀರು ತೆರಿಗೆ ಪಾವತಿಸಲು ಮಡಿಕೇರಿ ನಗರಸಭೆ ಸೂಚನೆ
ಮಡಿಕೇರಿ ಏ.೨ : ನಗರಸಭಾ ವ್ಯಾಪ್ತಿಯ ಮುಖ್ಯ ನೀರು ಸರಬರಾಜು ಮಾಡುವ ಕೂಟುಹೊಳೆ ಜಲಾಶಯದಲ್ಲಿ ಹಾಗೂ ನಗರಸಭಾ ವ್ಯಾಪ್ತಿಯಲ್ಲಿರುವ ರೋಷಾನರ ಕೆರೆ, ಕನ್ನಂಡಬಾಣೆ ಕೆರೆ, ಪಂಪಿನ ಕೆರೆ ಮತ್ತು ಜಯನಗರ ಬಾವಿಗಳಲ್ಲಿ ನೀರಿನ ಮಟ್ಟ ಕುಸಿದಿರುವ ಕಾರಣ ಹಾಲಿ ಕುಂಡಾಮೇಸ್ತ್ರಿಯಿಂದ ಕುಡಿಯುವ ನೀರನ್ನು ಕೂಟುಹೊಳೆಗೆ ಸರಬರಾಜು ಮಾಡಿ ಮತ್ತು ಕೂಟುಹೊಳೆಯಿಂದ ನಗರಸಭೆ ವ್ಯಾಪ್ತಿಗೆ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತಿದೆ.
ಈ ಕುಡಿಯುವ ನೀರನ್ನು ಸಂಸ್ಕರಿಸಿ ಶುದ್ಧೀಕರಿಸಿದ ನೀರಾಗಿರುವುದರಿಂದ ಹಾಗೂ ನೀರು ಅತ್ಯಮೂಲ್ಯವಾಗಿರುವುದರಿಂದ ಅವಶ್ಯವಿದ್ದಾಗ ಮಾತ್ರ ನೀರನ್ನು ಪೋಲು ಮಾಡದೆ ಶೇಖರಿಸಿ ಇಟ್ಟುಕೊಂಡು ಬಳಸಲು ಕೋರಿದೆ. ಕುಡಿಯುವ ನೀರನ್ನು ತೋಟಗಳಿಗೆ, ವಾಹನಗಳಿಗೆ ಉಪಯೋಗಿಸುವುದು ಕಂಡುಬಂದಲ್ಲಿ ನಲ್ಲಿ ಸಂಪರ್ಕವನ್ನು ಕಡಿತಗೊಳಿಸಲಾಗುವುದು ಹಾಗೂ ದಂಡ ವಿಧಿಸಲಾಗುವುದು. ಬಾಕಿ ಇರುವ ಕುಡಿಯುವ ನೀರು ತೆರಿಗೆಯನ್ನು ಪಾವತಿಸುವಂತೆ ನಗರಸಭೆ ಪೌರಾಯುಕ್ತ ಎಂ.ಎಲ್. ರಮೇಶ್ ಅವರು ತಿಳಿಸಿದ್ದಾರೆ.

No comments

Post a Comment