ಪ್ರಧಾನಿ ಮೋದಿ ತಮ್ಮ ಸಂದರ್ಶನಕ್ಕೆ ನಟನನ್ನು ತಂದಿದ್ದಾರೆ : ಒವೈಸಿ

No comments

ಹೈದರಾಬಾದ್​: ಟಿವಿ ಆ್ಯಂಕರ್​ಗಳು ತಮ್ಮ ನಿರೀಕ್ಷೆಯನ್ನು ಪೂರ್ಣಗೊಳಿಸಲಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬಾಲಿವುಡ್​ ನಟನನ್ನು ಕರೆಸಿ ಅವರಿಗೆ ಸಂದರ್ಶನ ನೀಡಿದ್ದಾರೆ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್​ ಒವೈಸಿ ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಒವೈಸಿ ‘ಟಿವಿ ನಿರೂಪಕರು ಸರಿಯಾಗಿ ನಟಿಸಲಿಲ್ಲ. ಹಾಗಾಗಿ ಅವರು ಬಾಲಿವುಡ್​ ನಟ ಅಕ್ಷಯ್​ ಕುಮಾರ್​ ಅವರನ್ನು ಕರೆತಂದರು. ಅವರು ಕೇಳಿದ ಪ್ರಶ್ನೆಯಾದರೂ ಏನು? ನೀವು ಮಾವಿನ ಹಣ್ಣನ್ನು ಕತ್ತರಿಸಿ ತಿನ್ನುತ್ತೀರೋ ಅಥವಾ ಇಡಿಯಾಗಿ ತಿನ್ನುತ್ತೀರೋ? ಇದೊಂದು ಪ್ರಶ್ನೆಯೇ? ಅರೇ ದೀವಾನೇ ನನಗೇ ಮಾವಿನ ಹಣ್ಣು ತಿನ್ನಲು ಬರುವುದಿಲ್ಲ. ನೀನು ಮಾವಿನ ಹಣ್ಣನ್ನು ಕತ್ತರಿಸಿ ತಿನ್ನುತ್ತೀರೋ ಅಥವಾ ಇಡಿಯಾಗಿ ತಿನ್ನುತ್ತೀರೋ ಎಂದು ಕೇಳುತ್ತೀಯಾ? ಮಾವಿನ ಹಣ್ಣು ಸಿಕ್ಕರೆ ಅದನ್ನು ತಿನ್ನಬೇಕು ಅಷ್ಟೇ ಎಂದು ಮೋದಿಯವರ ಸಂದರ್ಶನದಲ್ಲಿ ಪ್ರಸ್ತಾಪವಾದ ಅಂಶಗಳನ್ನು ಟೀಕಿಸಿದರು.ಅಕ್ಷಯ್​ ಕುಮಾರ್​ ಅವರನ್ನು ನಮೋ ಟಿವಿಯ ನಿರೂಪಕರಾಗಿ ನೇಮಿಸಬೇಕು ಎಂದು ಒವೈಸಿ ಸಲಹೆ ನೀಡಿದರು.ಪ್ರಧಾನಿ ಮೋದಿ 2 ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿದ್ದರು. ಆದರೆ, ಯಾರಿಗಾದರೂ ಉದ್ಯೋಗ ಸಿಕ್ಕಿದೆಯೇ? ಮೋದಿ ಅವರು ತಾವು ಕೇವಲ ನಾಲ್ಕು ಗಂಟೆ ನಿದ್ದೆ ಮಾಡುತ್ತೇನೆ. ಉಳಿದ ಸಮಯ ಕೆಲಸ ಮಾಡುತ್ತೇನೆ ಎಂದು ತಮ್ಮ ಸಂದರ್ಶನದಲ್ಲಿ ತಿಳಿಸಿದ್ದಾರೆ. ಇದು ನಿಜವಾದರೆ ರೈತರು ಯಾಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ? ದೇಶದಲ್ಲಿ ನಿರುದ್ಯೋಗದ ಪ್ರಮಾಣ ಯಾಕೆ ಹೆಚ್ಚಿದೆ? ಪುಲ್ವಾಮಾದಲ್ಲಿ 50 ಕೆ.ಜಿ. ಸ್ಫೋಟಕ ಸ್ಫೋಟಿಸಿದ್ದು ಹೇಗೆ ಎಂದು ಒವೈಸಿ ಪ್ರಧಾನಿಯನ್ನು ಪ್ರಶ್ನಿಸಿದರು.

No comments

Post a Comment