ಕೊಡಗು ಜಿಲ್ಲಾ ಮುಸ್ಲಿಂ ಕಪ್ ಕ್ರಿಕೆಟ್ ಪಂದ್ಯಾಟ: ಮಾಯಮುಡಿ ತಂಡ ಕ್ವಾಟರ್ ಫೈನಲ್ಗೆ ಲಗ್ಗೆ

No comments
 

ಕೊಡಗು ಜಿಲ್ಲಾ ಮುಸ್ಲಿಂ ಕಪ್ ಕ್ರಿಕೆಟ್ ಪಂದ್ಯಾಟ: ಮಾಯಮುಡಿ ತಂಡ ಕ್ವಾಟರ್ ಫೈನಲ್ಗೆ ಲಗ್ಗೆ
ಚೆಟ್ಟಳ್ಳಿ: ವಿರಾಜಪೇಟೆ ಸಮೀಪದ ಕಡಂಗದ ಫ್ರೌಡ ಶಾಲಾ ಮೈದಾನದಲ್ಲಿ ಅರಫಾ ಫ್ರೆಂಡ್ಸ್ ಕಡಂಗ ಇವರ ವತಿಯಿಂದ ನಡೆಯುತ್ತಿರುವ ೧೬ ನೇ ವರ್ಷದ ಕೊಡಗು ಮುಸ್ಲಿಂ ಕಪ್ ಕ್ರಿಕೆಟ್ ಪಂದ್ಯಾಟದಲ್ಲಿ ಮಾಯಮುಡಿ

 ತಂಡ ,ಹೊಲಮಾಳ ತಂಡದ ವಿರುದ್ಧ ೭ ವಿಕೆಟ್ಗಳಿಗೆ ಜಯಸಾಧಿಸಿ  ಕ್ರೀಡಾಕೂಟದಲ್ಲಿ ಮೊದಲ ತಂಡವಾಗಿ ಕ್ವಾರ್ಟರ್ ಫೈನಲ್ಗೆ ಲಗ್ಗೆಯಿಟ್ಟಿದೆ.
ಕಲ್ಲುಬಾಣೆ ಹಾಗೂ ಕೊಂಡಂಗೇರಿ ಈ ಎರಡು ತಂಡಗಳ ನಡುವಿನ ಪಂದ್ಯಾಟದಲ್ಲಿ ಕಲ್ಲಬಾಣೆ ತಂಡವನ್ನು ಕೊಂಡಂಗೇರಿ ತಂಡವು ಸೂಪರ್ ಓವರ್ನಲ್ಲಿ ಮಣಿಸಿ ಗೆಲುವು ಸಾಧಿಸಿದರು.
ಎರಡನೇ ಪಂದ್ಯಾಟವು ಕುಶಾಲನಗರದ ತಾಜ್ ಕ್ರಿಕೆಟರ್ಸ್ ಹಾಗೂ ಕೋಯಿನಾಡ್ ಫ್ರೆಂಡ್ಸ್ ನಡುವೆ ನಡೆಯಿತು.

ತಾಜ್ ಕ್ರಿಕೆಟರ್ಸ್ ತಂಡವು ಕೋಯಿನಾಡ್ ತಂಡದ ವಿರುದ್ದ ೯ ವಿಕೆಟ್ಗಳ ರೋಜಕ ಗೆಲುವು ಸಾಧಿಸಿತು.
ಮೂರನೇ ಪಂದ್ಯಾಟದಲ್ಲಿ ಫ್ರೀಡಂ ಬಾಯ್ಸ್ ಹುಂಡಿ  ತಂಡವು  ಕೂಡಿಗೆ ತಂಡದ ವಿರುಧ್ದ ಸೆಣಸಿ ೬ ವಿಕೆಟ್ಗಳ ಗೆಲುವು ಸಾಧಿಸಿದರು.
ನಾಲ್ಕನೇ ಪಂದ್ಯಾಟವು ಲಕ್ಕಿ ಬಾಯ್ಸ್ ಕುಂಜಿಲ ಹಾಗೂ ಓಲ್ಡ್ ಫ್ರೆಂಡ್ಸ್ ಕಡಂಗ ತಂಡಗಳ ನಡುವೆ ನಡೆಯಿತು.ಈ ಪಂದ್ಯಾಟದಲ್ಲಿ ಲಕ್ಕಿ ಬಾಯ್ಸ್ ಕುಂಜಿಲ ತಂಡ  ೩೦ ರನ್ಗಳ ಗೆಲುವು ಸಾಧಿಸಿ ಮುಂದಿನ ಹಂತಕ್ಕೆ ಪ್ರವೇಶಿಸಿದರು.
ಬ್ಲ್ಯಾಕ್ ಕೋಬ್ರಾ ವಿರಾಜಪೇಟೆ ಹಾಗೂ ಅಯ್ಯಂಗೇರಿ ತಂಡಗಳ ನಡುವಿನ‌ ಪಂದ್ಯಾಟದಲ್ಲಿ ಬ್ಲ್ಯಾಕ್‌ ಕೋಬ್ರಾ ತಂಡವು ಗೆದ್ದಿತು.
ಆರನೇ ಪಂದ್ಯಾಟದಲ್ಲಿ ಕಾಟ್ರಕೊಲ್ಲಿ ತಂಡವು ಗೋಣಿಕೊಪ್ಪ ತಂಡವನ್ನು ಮಣಿಸಿ ಮುಂದಿನ ಹಂತಕ್ಕೆ ಅರ್ಹತೆ ಪಡೆದರು.
ತೀರ್ಪುಗಾರರಾಗಿ ಸತ್ತಾರ್,ಅಹ್ಮದ್,ಕರೀಂ, ರಶೀದ್ ಎಡಪಲಾ ಕಾರ್ಯನಿರ್ವಹಿಸಿದರು.
 *ಬಾಕ್ಸ್*

ಇಂದಿನ ಪಂದ್ಯಾಟದ
ಸೌತ್ ಇಲವೆನ್ ಅಮ್ಮತ್ತಿ-ಬದ್ರಿಯಾ ಕೊಮ್ಮತ್ತೋಡ್

ಬ್ಲೂ ಬಾಯ್ಸ್: ಕೆ.ವೈ.ಸಿ ಕಡಂಗ

ಚೆರಿಯಪರಂಬು-ಫ್ರೆಂಡ್ಸ್ ಕ್ರಿಕೆಟರ್ಸ್ ಮೂರ್ನಾಡು

ಚೋಕಂಡಳ್ಳಿ-ಅಲ್ ಅಮೀನ್

ಬೋಯಿಕೇರಿ-ಗ್ರೀನ್ ಫೋರ್ಟ್ ಅಯ್ಯಂಗೇರಿ.
*ಕೆ.ಎಂ ಇಸ್ಮಾಯಿಲ್ ಕಂಡಕರೆ*

No comments

Post a Comment