ಮತದಾನದ ಬಹಿಷ್ಕಾರ :ಹೆಚ್ಚುವರಿ ಜಿಲ್ಲಾಧಿಕಾರಿಯವರಿಂದ ಜಾಗಲೆ ಗ್ರಾಮಸ್ಥರ ಮನವೊಲಿಕೆ ಯಶಸ್ವಿ

No comments

ಹೆಚ್ಚುವರಿ ಜಿಲ್ಲಾಧಿಕಾರಿಯವರಿಂದ ಜಾಗಲೆ ಗ್ರಾಮಸ್ಥರ ಮನವೊಲಿಕೆ ಯಶಸ್ವಿ
    ಮಡಿಕೇರಿ :ವಿರಾಜಪೇಟೆ ತಾಲ್ಲೂಕಿನ ನಿಟ್ಟೂರು ಬಳಿಯ ಜಾಗಲೆ ಗ್ರಾಮಕ್ಕೆ ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಶಿವರಾಜು ಅವರು ಸೋಮವಾರ ಭೇಟಿ ನೀಡಿ ಅಲ್ಲಿನ ಮತದಾರರನ್ನು ಭೇಟಿ ಮಾಡಿ ಈಗಾಗಲೇ ಗುರುತಿಸಲಾಗಿರುವ ತಟ್ಟೆಕೆರೆ ಮತಗಟ್ಟೆಗೆ ತೆರಳಿ ಮತದಾನ ಮಾಡುವಂತೆ ಮನವೊಲಿಸಿದ್ದಾರೆ.  
      ಈ ಹಿಂದಿನ ಚುನಾವಣೆಗಳಲ್ಲಿ ಜಾಗಲೆ ಆಶ್ರಮ ಶಾಲೆ ಆವರಣದಲ್ಲಿ ಮತಗಟ್ಟೆ ಕೇಂದ್ರ ತೆರೆಯಲಾಗುತ್ತಿತ್ತು,  ಆದರೆ ಈ ಬಾರಿ ತಟ್ಟೆಕೆರೆಗೆ ಮತಗಟ್ಟೆ ಸ್ಥಳಾಂತರವಾಗಿರುವುದರಿಂದ ಜಾಗಲೆಯ ಗ್ರಾಮಸ್ಥರು ಮತದಾನ ಬಹಿಷ್ಕರಿಸುವುದಾಗಿ ಹೇಳಿದ್ದರು, ಈ ಹಿನ್ನೆಲೆ ಜಿಲ್ಲಾಧಿಕಾರಿ ಅವರ ನಿರ್ದೇಶನದಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಅವರು ಭೇಟಿ ಮಾಡಿ ಜಾಗಲೆ ಗ್ರಾಮಸ್ಥರನ್ನು ಮನವೊಲಿಸಿದ್ದಾರೆ.    

      ಈಗಾಗಲೇ ನಿರ್ಧರಿಸಲಾಗಿರುವ ತಟ್ಟೆಕೆರೆ ಮತಗಟ್ಟೆಗೆ ತೆರಳಿ ಮತದಾನ ಮಾಡಬೇಕು. ಮುಂದಿನ ಚುನಾವಣೆ ವೇಳೆಗೆ ಹೊಸ ಮತಗಟ್ಟೆ ಸ್ಥಾಪನೆ ಸಂಬಂಧ ಚುನಾವಣಾ ಆಯೋಗಕ್ಕೆ ಪತ್ರ ಬರೆದು ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಮನವರಿಕೆ ಮಾಡಿದ ಹಿನ್ನೆಲೆ ಜಾಗಲೆ ಗ್ರಾಮಸ್ಥರು ಒಪ್ಪಿಕೊಂಡಿದ್ದಾರೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಅವರು ತಿಳಿಸಿದ್ದಾರೆ.     ಸಹಾಯಕ ಚುನಾವಣಾಧಿಕಾರಿ ಶ್ರೀನಿವಾಸ್, ತಹಶೀಲ್ದಾರ್ ಗೋವಿಂದರಾಜು ಇತರರು ಇದ್ದರು.

No comments

Post a Comment