ಸಂಗೀತ ,ನೃತ್ಯ, ಗಾಯನ, ಜಾನಪದ ಕಲೆಗಳ ಸಂಗಮದೊಂದಿಗೆ ಕ್ರಾಫ್ಟ್ ಮೇಳಕ್ಕೆ ತೆರೆ

No comments

ಪ್ರತೀ ವಷ9ವೂ ಕ್ರಾಫ್ಟ್ ಮೇಳ ಆಯೋಜನೆಗೆ ನಿಧಾ9ರ

ಸಂಗೀತ, ನ?ತ್ಯ, ಗಾಯನ, ಜಾನಪದ ಕಲೆಗಳ ಸಂಗಮದೊಂದಿಗೆ ಕ್ರಾಫ್ಟ್ ಮೇಳಕ್ಕೆ ತೆರೆ.

ಮಡಿಕೇರಿ  ಏ.2- ಮೂರು ದಿನಗಳ ಕಾಲ ಮಡಿಕೇರಿಯ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ವತಿಯಿಂದ ಸ್ಪಿಕ್ ಮೆಕೆ ಆಶ್ರಯದಲ್ಲಿ ಆಯೋಜಿತ ಕ್ರಾಫ್ಟ್ ಮೇಳಕ್ಕೆ ಹಾಡು, ನ?ತ್ಯ, ಸಂಗೀತವಾದ್ಯಗಳ ಮೆರುಗಿನೊಂದಿಗೆ ತೆರೆ ಬಿದ್ದಿದೆ.

ಇದೇ ಮೊದಲ ಬಾರಿಗೆ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದಲ್ಲಿ ಭಾರತೀಯ ಕಲಾ ಪರಂಪರೆಗಳನ್ನು ವಿದ್ಯಾಥಿ9ಗಳಿಗೆ ಪರಿಚಯಿಸುವ ನಿಟ್ಟಿನಲ್ಲಿ ಆಯೋಜಿತ ಕ್ರಾಫ್ಟ್ ಮೇಳದಲ್ಲಿ ಜಿಲ್ಲೆಯಾದ್ಯಂತಲಿನ 800 ಕ್ಕೂ ಅಧಿಕ ವಿದ್ಯಾಥಿ9ಗಳು, ಪೆÇೀಷಕರು ಪಾಲ್ಗೊಂಡಿದ್ದರು.

ಕ್ರಾಫ್ಟ್ ಮೇಳದ ಕೊನೇ ದಿನ ಶಿಬಿರಾಥಿ9ಗಳು ತಾವು ಕಲಿತ ಕಲೆಯನ್ನು ಸಾವ9ಜನಿಕರ ಮುಂದೆ ವೇದಿಕೆಯಲ್ಲಿ ಪ್ರದಶಿ9ಸಿದರು.

ಪ್ರತೀ ನಿತ್ಯ 3 ಗಂಟೆಯಂತೆ ಮೂರು ದಿನಗಳಲ್ಲಿ  ಕೇವಲ 9 ಗಂಟೆಗಳ ಕಾಲ ಕಲಿತ ಯಕ್ಷಗಾನ,  ಕುಚಿಪುಡಿ ನ?ತ್ಯ, ಕಲರಿಪಯಟ್,ಕಂಸಾಳೆಯನ್ನು ಶಿಬಿರಾಥಿ9ಗಳು  ಪ್ರಭುದ್ದ ಕಲಾವಿದರಂತೆ ಪ್ರದಶಿ9ಸಿ ಅಪಾರ ಮೆಚ್ಚುಗೆ ಗಳಿಸಿದರು. 

ಶ್ರೀನಿವಾಸ್ ಸಾಸ್ತಾನ್ ನಿದೇ9ಶನದಲ್ಲಿ ಶಿಬಿರಾಥಿ9ಗಳಿಂದ ಸಮುದ್ರ ಮಥನ ಯಕ್ಷಪ್ರಸಂಗ ಮೂಡಿಬಂತು. ಯಕ್ಷಗಾನದ ವೇಷಧರಿಸಿದ ಶಿಬಿರಾಥಿ9ಗಳು ಹಿಮ್ಮೇಳಕ್ಕೆ ತಕ್ಕಂತೆ ವೇದಿಕೆಯಲ್ಲಿ ಅಬ್ಬರಿಸಿ ಬೊಬ್ಬಿರಿದರು.  ಸಭಿಕರ ಮಧ್ಯೆಯೂ ಯಕ್ಷಪಾತ್ರದಾರಿಗಳು ಆಗಮಿಸಿ ಗಮನ ಸೆಳೆದರು.

ಖ್ಯಾತ ಕಲಾವಿದೆ ವೈಜಯಂತಿಕಾಶಿ ಮತ್ತು ಪ್ರತಿಕ್ಷಾ ಕಾಶಿ ನಿದೇ9ಶನದಲ್ಲಿ ಕುಚುಪುಡಿ ನ?ತ್ಯ ಕಲಿತಿದ್ದ ವಿದ್ಯಾಥಿ9ಗಳು ತಾವು ಕಲಿತ ನ?ತ್ಯವನ್ನು ಮನಮೋಹಕವಾಗಿ ವೇದಿಕೆಯಲ್ಲಿ ಪ್ರದಶಿ9ಸಿ ಮೆಚ್ಚುಗೆ ಗಳಿಸಿದರು.

ಮೈಸೂರಿನ ಹಿರಿಯ ಕಂಸಾಳೆ ಕಲಾವಿದ ರೇವಣ್ಣ ಮಾಗ9ದಶ9ನದಲ್ಲಿ ಜಾನಪದ ನ?ತ್ಯಪ್ರಕಾರ ಕಂಸಾಳೆಯನ್ನು ಅಭ್ಯಸಿಸಿದ್ದ 80 ಕ್ಕೂ ಅಧಿಕ ವಿದ್ಯಾಥಿ9ಗಳು ಚೆಲ್ಲಿದರು ಮಲ್ಲಿಗೆಯಾ ಎಂಬ ಜಾನಪದ ಹಾಡಿಗೆ ತಕ್ಕಂತೆ ಹೆಜ್ಜೆ ಹಾಕುತ್ತಾ ನತಿ9ಸಿ ತಾವೂ ಕಂಸಾಳೆ ಕಲೆಯಲ್ಲಿ ಪ್ರಬುದ್ದತೆ ತೋರುವ ಭರವಸೆ ಮೂಡಿಸಿದರು.

ಕೇರಳದ ಕಡಲತೀರದ ರೋಮಾಂಚಕ ಸಮರಕಲೆಯಾದ ಕಲರಿಪಯಟ್ ನ ಪ್ರಾಥಮಿಕ ಹಂತವನ್ನು  ವಲ್ಲಭಟ್ ಕಲಾಕೇಂದ್ರದ ಕ?ಷ್ಣದಾಸ್ ಅವರಿಂದ  ಮೂರು ದಿನಗಳಲ್ಲಿ ಕಲಿತ ವಿದ್ಯಾಥಿ9ಗಳು ರಂಗದಲ್ಲಿ ಅದ್ಬುತವಾಗಿ ಕೇರಳದ ಕಲಾ ಶ್ರೀಮಂತಿಕೆಯನ್ನು ಪ್ರದಶಿ9ಸಿ  ಚಪ್ಪಾಳೆ ಗಿಟ್ಟಿಸಿದರು.

ಚಿತ್ತಾರ ಕಲೆ, ಚೆರಿಯಲ್ ಮುಖವಾಡ, ಘೋಂಡಾ ಕಲೆ,ಕಸೂತಿ, ಪೇಪರ್ ಮೆಶೆ,ಹುಣಸೆ ಹಣ್ಣಿನ ಸಿಪ್ಪೆಯ ಪುಡಿಯಿಂದ ತಯಾರಿಸಲಾದ ಮುಖವಾಡ ಇತ್ಯಾದಿ ಕಲೆಯಲ್ಲಿ ತರಬೇತಿ ಪಡೆದ ಶಿಬಿರಾಥಿ9ಗಳನ್ನು ತಾವು ಸ್ವತ ಕಲಿತು ತಯಾರಿಸಿದ ಕಲೆಯನ್ನು ವೇದಿಕೆಯಲ್ಲಿ ಪ್ರದಶಿ9ಸಿದರು.

  ಕ್ರಾಫ್ಟ್ ಮೇಳ ಯಶಸ್ವಿನ ಬಗ್ಗೆ ಸರಳ ಸಮಾರೋಪ ಕಾಯ9ಕ್ರಮದಲ್ಲಿ ಸಂತಸ ವ್ಯಕ್ತಪಡಿಸಿದ ಭಾರತೀಯ ವಿದ್ಯಾಭವನ ಕೊಡಗು ಕೇಂದ್ರದ ಅಧ್ಯಕ್ಷ ಕೆ.ಎಸ್.ದೇವಯ್ಯ, ನಿರೀಕ್ಷೆಗೂ ಮೀರಿ ವಿದ್ಯಾಥಿ9ಗಳು ಕ್ಯಾಫ್ಟ್ ಮೇಳದಲ್ಲಿ ಶಿಬಿರಾಥಿ9ಗಳಾಗಿ ಪಾಲ್ಗೊಂಡು ಆಯೋಜಕರ ಶ್ರಮಕ್ಕೆ ಪ್ರತಿಫಲ ನೀಡಿದ್ದಾರೆ. ಮುಂದಿನ ವಷ9ಗಳಲ್ಲಿಯೂ ಕ್ಯಾಫ್ಟ್ ಮೇಳವನ್ನು ಬಾರತೀಯ ವಿದ್ಯಾಭವನ  ಕೊಡಗು ವಿದ್ಯಾಲಯ ಹಾಗೂ ಸ್ಪಿಕ್ ಮೆಕೆ ವಾಷಿ9ಕ ಕಾಯ9ಕ್ರಮವನ್ನಾಗಿ ಆಯೋಜಿಸಲಿದೆ ಎಂದು ಪ್ರಕಟಿಸಿದರು. ಸ್ಪಿಕ್ ಮೆಕೆ 15  ವಷ9ಗಳಿಂದ ಭಾರತೀಯ ವಿದ್ಯಾಭವನದ ಜತೆಗೂಡಿ ಭಾರತೀಯ ಕಲಾ ಸಂಸ್ಕ?ತಿಯನ್ನು ಜನತೆಗೆ ಪರಿಚಯಿಸುವ ಕಾಯ9 ಕೈಗೊಂಡಿದೆ ಎಂದೂ ದೇವಯ್ಯ ಮಾಹಿತಿ ನೀಡಿದರು.

ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ಉಪಾಧ್ಯಕ್ಷ ಕೆ.ಪಿ.ಉತ್ತಪ್ಪ, ಭಾರತೀಯ ವಿದ್ಯಾಭವನದ ಕೊಡಗುಕೇಂದ್ರದ ಗೌರವ ಕಾಯ9ದಶಿ9 ಬಾಲಾಜಿ ಕಶ್ಯಪ್, ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ಮುಖ್ಯಕಾಯ9ನಿವ9ಹಣಾಧಿಕಾರಿ ವಿದ್ಯಾಹರೀಶ್, ವ್ಯವಸ್ಥಾಪಕ ರವಿ, ಉಪಪ್ರಾಂಶುಪಾಲೆ ವನಿತಾ ಪಾಲ್ಗೊಂಡಿದ್ದರು.

ಬಾಕ್ಸ್

ಮನೆಸೆಳೆದ  ಮೈಸೂರು ಸಹೋದರರ ವಯೊಲಿನ್ ವಾದನ
.....

ಕ್ರಾಫ್ಟ್ ಮೇಳದ ಕೊನೇ ದಿನದ ಸಾಂಸ್ಕ?ತಿಕ ಕಾಯ9ಕ್ರಮದಲ್ಲಿ  ಮೈಸೂರಿನ ಹೆಸರಾಂತ ವಯೊಲಿನ್ ಸಹೋದರರಾದ ವಿದ್ಯಾನ್ ನಾಗರಾಜ್ ಮತ್ತು  ಡಾ. ಮಂಜುನಾಥ್ ಅವರಿಂದ ಮನಸೆಳೆಯುವ ವಯೊಲಿನ್ ಕಾಯ9ಕ್ರಮ ಕಲಾಪ್ರೇಮಿಗಳಿಗೆ ರಸದೌತಣವನ್ನೇ ನೀಡಿತು.

ಮಾಂತ್ರಿಕ ವಯೊಲಿನ್ ವಾದನದಿಂದಾಗಿ ಮೈಸೂರಿನ ಖ್ಯಾತಿಯನ್ನು ಜಗತ್ತಿನಾದ್ಯಂತ ಪಸರಿಸಿದ ಈ ಸಹೋದರರು ವಿದೇಶದಲ್ಲಿ ಮೈಸೂರಿನ ವಯೊಲಿನ್ ರಾಜಕುಮಾರರು ಎಂದೇ ಖ್ಯಾತಿಗಳಿಸಿದ್ದಾರೆ.ಕನಾ9ಟಕ ರಾಜ್ಯೋತ್ಸವ ಪ್ರಶಸ್ತಿ, ಕೇಂದ್ರ ಸಕಾ9ರದ ಪ್ರತಿಷ್ಟಿತ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಚೌಡಯ್ಯ ರಾಷ್ಟ್ರೀಯ ಪ್ರಶಸ್ತಿ, ಸಂಗೀತ ಸಾಮ್ರಾಟ್ ಸೇರಿದಂತೆ ಹಲವಾರು ಬಿರುದು, ಪ್ರಶಸ್ತಿಗಳನ್ನು ಪಡೆದಿರುವ  ಈ ಸಹೋದರರು ಮಡಿಕೇರಿಯ ಸಂಜೆಯ ತಂಗಾಳಿಯಲ್ಲಿ ತಮ್ಮ ಎರಡನೇ ಕಾಯ9ಕ್ರಮ ನೀಡಿ ಮನಸೆಳೆದರು. ಶರತ್ ಕೌಶಿಕ್, ಸುಮಂತ್ ಮಂಜುನಾಥ್, ತುಮಕೂರು ರವಿಶಂಕರ್ ಹಿಮ್ಮೇಳದಲ್ಲಿ ಸಾಥ್ ನೀಡಿದರು.

No comments

Post a Comment