ಡಾ.ಮೋನಿಕಾ ಆಚಾರ್ಯಗೆ ವಿಶ್ವಕರ್ಮ ಸೇವಾ ಸಂಘದಿಂದ ಸನ್ಮಾನ
ಮಡಿಕೇರಿ ಏ.13 :
ಮಂಗಳೂರಿನ ಎ.ಜೆ.ಮೆಡಿಕಲ್ ಕಾಲೇಜ್‌ನಲ್ಲಿ ವೈದ್ಯಕೀಯ ಪದವಿ ಪರೀಕ್ಷೆಯಲ್ಲಿ ನಾಲ್ಕು ಚಿನ್ನದ ಪದಕ ಪಡೆದಿರುವ ಡಾ.ಮೋನಿಕಾ ಆಚಾರ್ಯ ಅವರನ್ನು ಮಡಿಕೇರಿಯ ವಿಶ್ವಕರ್ಮ ಸೇವಾ ಸಂಘ ಹಾಗೂ ವಿಶ್ವಕರ್ಮ ಮಹಿಳಾ ಸಂಘದ ವತಿಯಿಂದ ಸನ್ಮಾಸಿ ಗೌರವಿಸಲಾಯಿತು.
ಸಂಘದ ಮಡಿಕೇರಿ ಕಚೇರಿಯಲ್ಲಿ ಸಂಘದ ಅಧ್ಯಕ್ಷ ಬಿ.ಸಿ.ಮೋಹನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೆಳುವಾಯಿ ಕುಟುಂಬಸ್ಥರಾದ ಬೆಂಗಳೂರಿನ ಬಿ.ಸಿ.ಶ್ರೀಧರ ಆಚಾರ್ಯ ಅವರು ಡಾ. ಮೋನಿಕ ಆಚಾರ್ಯ ಅವರಿಗೆ ರೂ.೧೦,೦೦೦ ಸಾವಿರ ಪ್ರೋತ್ಸಾಹ ಧನ ನೀಡಿ ಗೌರವಿಸಿದರು.
ಮಡಿಕೇರಿಯ ದಮಯಂತಿ ಹಾಗೂ ರಾಮಚಂದ್ರ ಆಚಾರ್ಯ ಅವರ ಪುತ್ರಿ ಮೋನಿಕಾ ಸಂತಜೋಸೇಫರ ಶಾಲೆಯಲ್ಲಿ ಪ್ರಾಥಮಿಕ, ಪ್ರೌಢ ಮತ್ತು ಪದವಿ ಪೂರ್ವ ವಿದ್ಯಾಭ್ಯಾಸವನ್ನು ಮಾಡಿದ್ದಾರೆ.
No comments
Post a Comment