ತಾಲ್ಲೂಕು ಜಾನಪದ ಪರಿಷತ್ ನಿಂದ ಚಿತ್ರ ಕಲಾ ಸ್ಪರ್ಧೆ

No comments

ತಾಲೂಕು ಜಾನಪದ ಪರಿಷತ್ ನಿಂದ ಆಯೋಜಿತ ಚಿತ್ರಕಲಾ ಸ್ಪಧೆ೯ಯಲ್ಲಿ 148 ಸ್ಪಧಿ೯ಗಳು ಭಾಗಿ : ರಾಜಾಸೀಟ್ ನಲ್ಲಿ ಗಮನ ಸೆಳೆದ ಮತದಾನ ಜಾಗೃತಿಯ ಕ್ಯಾನ್ವಸ್
ಮಡಿಕೇರಿ. ಏ.೧೫ : ಮತದಾರರಲ್ಲಿ ತಮ್ಮ ಹಕ್ಕಿನ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮಡಿಕೇರಿ ತಾಲೂಕು ಜಾನಪದ ಪರಿಷತ್ ವತಿಯಿಂದ ರೋಟರಿ ಮಿಸ್ಟಿ ಹಿಲ್ಸ್, ಮತದಾರರ ಶಿಕ್ಷಣ, ಸಹಭಾಗಿತ್ವ ಸಮಿತಿ ಸಂಯುಕ್ತಾಶ್ರಯದಲ್ಲಿ ಆಯೋಜಿತ ಮತದಾರರ ಜಾಗೃತಿ ಕುರಿತ ಬೃಹತ್ ಕ್ಯಾನ್ವಸ್ ಅಪಾರ ಜನ ಮೆಚ್ಚುಗೆ ಗಳಿಸಿತು.
ಮಡಿಕೇರಿಯ ರಾಜಾಸೀಟ್ ನಲ್ಲಿ ವಿಶ್ನಚಿತ್ರಕಲಾ ದಿನಾಚರಣೆ ಸಂದಭ೯ ಆಯೋಜಿತ ಮತದಾರರ ಜಾಗೃತಿ ಕಾಯ೯ಕ್ರಮವನ್ನು ಚಿತ್ರಕಲಾವಿದ ಬಿ.ಆರ್.ಸತೀಶ್ ರಚಿಸಿದ ಮತದಾನದ ಮಹತ್ವ ಬಿಂಬಿಸುವ ಕೈಬೆರಳಿನ ಬೃಹತ್ ಚಿತ್ರಕ್ಕೆ ಬಣ್ಣ ಸಿಂಪಡಣೆ ಮೂಲಕ ಜಿ.ಪಂ. ಮುಖ್ಯಕಾಯ೯ನಿವ೯ಹಣಾಧಿಕಾರಿ ಮತ್ತು ಮತದಾರರ ಶಿಕ್ಷಣ, ಸಹಭಾಗಿತ್ವ ಸಮಿತಿ ಅಧ್ಯಕ್ಷೆ ಲಕ್ಷ್ಮಿ ಪ್ರಿಯ ಉದ್ಘಾಟಿಸಿದರು.
ಮತದಾರರಲ್ಲಿ ಮತದಾನ ಸಂದಭ೯ ರಾಜಕೀಯ ಪಕ್ಷಗಳ ಆಮಿಷಕ್ಕೆ ಬಲಿಯಾಗದಿರಿ ಎಂಬುದೂ ಸೇರಿದಂತೆ ವಿವಿಧ ಜಾಗೃತಿ ಸಂದೇಶಗಳ ಬ್ಯಾನರ್ ಅನಾವರಣಗೊಳಿಸಿದ ಬಳಿಕ ಮಾತನಾಡಿದ ಕೆ.ಲಕ್ಷ್ಮಿಪ್ರಿಯಾ ಅವರು ಇದೇ ೧೮ ರಂದು ನಡೆಯುವ ಮತದಾನದಂದು ೧೮ ವರ್ಷ ಪೂರ್ಣಗೊಂಡ ಪ್ರತಿಯೊಬ್ಬರೂ ಕಡ್ಡಾಯವಾಗಿ ಮತದಾನ ಮಾಡುವಂತಾಗಬೇಕು ಎಂದು ಕೋರಿದರು.
ಮತದಾನದ ಮಹತ್ವ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈಗಾಗಲೇ ಹಲವು ಕಾರ್ಯಕ್ರಮಗಳು ನಡೆದಿವೆ. ಆ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಶೇಕಡಾವಾರು ಮತದಾನಕ್ಕೆ ಅರ್ಹ ಮತದಾರರು ಮತಗಟ್ಟೆಗೆ ತೆರಳಿ ಮತದಾನ ಮಾಡಬೇಕು ಎಂದು ಅವರು ಹೇಳಿದರು.
ಈಗಾಗಲೇ ೧೦ ಸಖಿ ಮತಗಟ್ಟೆಗಳು, ೫ ಸಾಂಪ್ರದಾಯಿಕ ಮತಗಟ್ಟೆಗಳು, ೧ ವಿಶೇಷಚೇತನರ ಮತಗಟ್ಟೆ ಹಾಗೂ ನಗರಸಭೆಯಲ್ಲಿ ಒಂದು ಮಾದರಿ ಮತಗಟ್ಟೆ ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದು ಅವರು ತಿಳಿಸಿದ್ದರು.
ಜಿಲ್ಲಾ ಜಾನದಪ ಪರಿಷತ್ ಅಧ್ಯಕ್ಷ ಬಿ.ಜಿ.ಅನಂತಶಯನ ಮಾತನಾಡಿ ,ಪ್ರತಿಯೊಬ್ಬರ ಮತ ಅತ್ಯಮೂಲ್ಯವಾಗಿದ್ದು, ಒಂದೊಂದು ಮತವೂ ರಾಷ್ಟ್ರದ ಚರಿತ್ರೆಯನ್ನೇ ಬದಲಿಸಲಿದೆ. ಆದ್ದರಿಂದ ಅರ್ಹರೆಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಕರೆ ನೀಡಿದರು.
ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಬಿ.ಆರ್. ಸವಿತಾ ರೈ ಮಾತನಾಡಿ. ಪ್ರತಿಯೊಬ್ಬ ಮತದಾರರು ಮತ ಹಕ್ಕನ್ನು ಚಲಾಯಿಸಬೇಕು. ಪ್ರಜಾಪ್ರಭುತ್ವ ಭದ್ರ ಬುನಾದಿಗೆ ಕಡ್ಡಾಯವಾಗಿ ಮತದಾನ ಮಾಡಬೇಕು ಎಂದರು.
ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿ, ಮತಹಕ್ಕು ಚಲಾಯಿಸುವುದು ಅರ್ಹರೆಲ್ಲರ ಜವಾಬ್ದಾರಿಯಾಗಿದೆ. ಇದರಿಂದ ಪ್ರಶ್ನಿಸುವ ಹಕ್ಕು ದೊರೆಯಲಿದೆ ಎಂದು ಅವರು ಹೇಳಿದರು. ಚುನಾವಣೆಯಲ್ಲಿ ಜಯಗಳಿಸಿದವರು ಸಂಸತ್ತಿನಲ್ಲಿ ಪ್ರಶ್ನೆ ಮಾಡಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಬೇಕು. ಹಾಗೆಯೇ ಸೋತವರು ಸಹ ಕ್ಷೇತ್ರ ವ್ಯಾಪ್ತಿಯಲ್ಲಿ ಅಭಿವೃದ್ಧಿ ಸಂಬಂಧಿಸಿದಂತೆ ಬೆಳಕು ಚೆಲ್ಲುವಂತಾಗಬೇಕು. ಇದೇ ಪ್ರಜಾಪ್ರಭುತ್ವದ ಆಶಯವಾಗಿದೆ ಎಂದು ಕುಟ್ಟಪ್ಪ ನುಡಿದರು.
ಸ್ವೀಪ್ ಜಿಲ್ಲಾ ರಾಯಭಾರಿ ಭಾಗೀರಥಿ ಹುಲಿತಾಳ ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಮತದಾನವಾಗುತ್ತದೆ. ಅದೇ ರೀತಿ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿಯೂ ಹೆಚ್ಚಿನ ಮತದಾನ ಆಗಬೇಕು. ಮತದಾನದ ಮಹತ್ವವನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು. ರಾಜಕೀಯ ಪ್ರಜ್ಞೆ ಇರಬೇಕು ಎಂದು ಅವರು ಹೇಳಿದರು. ಮತದಾನವನ್ನು ಹಕ್ಕು ಎಂದು ತಿಳಿದುಕೊಂಡು ಅರ್ಹರೆಲ್ಲರೂ ಮತಹಕ್ಕು ಚಲಾಯಿಸಬೇಕು. ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ಸಾಮಾಜಿಕವಾಗಿ, ಆಥಿ೯ಕವಾಗಿ ಸಮಾನತೆ ತರಲು ಅರ್ಹರೆಲ್ಲರೂ ಮತದಾನ ಮಾಡಬೇಕು ಎಂದು ಅವರು ಕರೆ ನೀಡಿದರು.
ಚಿತ್ರಕಲಾವಿದ ಬಿ.ಆರ್.ಸತೀಶ್ ಮಾತನಾಡಿ ಒಂದು ಚಿತ್ರ ಸಾವಿರ ಪದಗಳಿಗೆ ಸಮವೆಂಬಂತೆ ಚಿತ್ರಕಲೆ ಮೂಲಕ ಮತದಾನ ಮಹತ್ವ ಸಾರುವ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುತ್ತದೆ. ಆ ನಿಟ್ಟಿನಲ್ಲಿ ಅರ್ಹರು ಮತದಾನ ಮಾಡುವಂತಾಗಬೇಕು ಎಂದು ಹೇಳಿದರು.
ಮಡಿಕೇರಿ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಅನಿಲ್ ಎಚ್.ಟಿ, ಮಾತನಾಡಿ, ಕಳೆದ ಮೂರು ವಷ೯ಗಳಿಂದ ತಾಲೂಕು ಜಾನಪದ ಪರಿಷತ್ ವತಿಯಿಂದ ವಿಶ್ವಕಲಾದಿನಾಚರಣೆ ಆಚರಿಸಲಾಗುತ್ತಿದ್ದು, ಕಳೆದ ವಷ೯ ಮತ್ತು ಈ ವಷ೯ ಚುನಾವಣೆ ಸನಿಹವಿದ್ದ ಹಿನ್ನಲೆಯಲ್ಲಿ ವಿದ್ಯಾಥಿ೯ಗಳಿಗೆ ಚಿತ್ರಕಲಾ ಸ್ಪದೆ೯ಯನ್ನು ಮತದಾನದ ಬಗ್ಗೆ ಆಯೋಜಿಸಲಾಗಿದೆ. ಈ ವಷ೯ ೧೪೮ ಸ್ಪಧಿ೯ಗಳು ಚಿತ್ರಕಲಾ ಸ್ಪದೆ೯ಗೆ ಪಾಲ್ಗೊಂಡಿರುವುದು ಹೆಮ್ಮೆ ತಂದಿದೆ ಎಂದರು.
ವಿರಾಜಪೇಟೆಯ ಗಾಯಕರಾದ ಜಾನಪದ ಪರಿಷತ್ ಸದಸ್ಯರೂ ಆಗಿರುವ ಬಿ.ಕೆ.ಮೋಹನ್ , ಕ್ಲಿಫಡ್೯ ಡಿಮೆಲ್ಲೋ ಮತ್ತು ಟಾಮಿ ಥೋಮಸ್ ತಂಡದಿಂದ ಮತದಾನದ ಬಗ್ಗೆ ವಿಶೇಷವಾದ ಹಾಡುಗಾರಿಕೆ ಮನಸೆಳೆಯಿತು. ಸಾವ೯ಜನಿಕರ ಎದುರೇ ಕಲಾವಿದ ಬಿ.ಆರ್.ಸತೀಶ್ ಬಿಳಿಪರದೆಯಲ್ಲಿ ಮತದಾನದ ಮಹತ್ವ ಸಾರುವ ಚಿತ್ರವನ್ನು ವಣ೯ಮಯವಾಗಿ ರಚಿಸಿ ಶ್ಲಾಘನೆಗೆ ಪಾತ್ರರಾದರು.
ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಜಿ.ಆರ್.ರವಿಶಂಕರ್, ವಾತಾ೯ಧಿಕಾರಿ ಚಿನ್ನಸ್ವಾಮಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಮಮ್ತಾಜ್, ಮತದಾರರ ಶಿಕ್ಷಣ, ಸಹಭಾಗಿತ್ವ ಸಮಿತಿ ಕೊಡಗು ಜಿಲ್ಲಾ ರಾಯಭಾರಿ ಈಶ್ವರಿ, ಹಿರಿಯ ಜಾನಪದ ಕಲಾವಿದೆ ಸುಳ್ಳಿಮಾಡ ಗೌರಿ ನಂಜಪ್ಪ, ಅರುಣ್ ಸ್ಟೋರ್ಸ್ ಮಾಲೀಕ ಎಂ.ಕೆ.ಅರುಣ್ , ಮಡಿಕೇರಿ ತಾಲೂಕು ಜಾನಪದ ಪರಿಷತ್ ಪ್ರಧಾನ ಕಾಯ೯ದಶಿ೯ ಸಂಗೀತಾ ಪ್ರಸನ್ನ, ಖಚಾಂಚಿ ಅಂಬೆಕಲ್ ನವೀನ್ ಕುಶಾಲಪ್ಪ ಸೇರಿದಂತೆ ರೋಟರಿ ಮಿಸ್ಟಿ ಹಿಲ್ಸ್, ಜಾನಪದ ಪರಿಷತ್ ನ ವಿವಿಧ ಪದಾಧಿಕಾರಿಗಳು, ಗ್ರೀನ್ ಸಿಟಿ ಫೋರಂ ಅಧ್ಯಕ್ಷ ಜಯಾಚಿಣ್ಣಪ್ಪ, ಕಾಯ೯ದಶಿ೯ ಪಿ.ಆರ್.ರಾಜೇಶ್, ನಿದೇ೯ಶಕ ಚೆಯ್ಯಂಡ ಸತ್ಯ, ಮೆಡಿಕಲ್ ಕಾಲೇಜ್ ಮುಖ್ಯಕಾಯ೯ನಿವ೯ಹಣಾಧಿಕಾರಿ ಮೇರಿ ನಾಣಯ್ಯ ಸೇರಿದಂತೆ ಅನೇಕರು ಪಾಲ್ಗೊಂಡು ಕ್ಯಾನ್ವಸ್ ನಲ್ಲಿ ನಾನೂ ಸ್ಮಾಟ್೯ ಮತದಾರ ಎಂಬ ಸಂದೇಶಕ್ಕೆ ಸಹಿ ಹಾಕಿ ಮತದಾನದ ಮಹತ್ವ ಸಾರಿದರು. ಮಧ್ಯಾಹ್ನದವರೆಗೂ ರಾಜಾಸೀಟ್ ನಲ್ಲಿ ಪ್ರವಾಸಿಗರೂ ಸೇರಿದಂತೆ ನೂರಾರು ಸಾವ೯ಜನಿಕರು ಕ್ಯಾನ್ವಸ್ ನಲ್ಲಿ ಸಹಿ ಹಾಕಿದರು.

No comments

Post a Comment