ಕೋವಿ ಕಳವು ಪ್ರಕರಣ:ಆರೋಪಿ ಅರೆಸ್ಟ್

No comments

ಕೋವಿ ಕಳವು ಪ್ರಕರಣ : ಪ್ರಮುಖ ಆರೋಪಿಯ ಬಂಧನ
ಮಡಿಕೇರಿ ಏ.1 :
ಮಡಿಕೇರಿ ನಗರದ ಮೈಸೂರು ರಸ್ತೆಯ ನಿವಾಸಿ, ನಿವೃತ್ತ ಸೇನಾಧಿಕಾರಿಯೊಬ್ಬರ ಮನೆಯಲ್ಲಿ ನಡೆದಿದ್ದ ಭಾರೀ ಮೌಲ್ಯದ ಹಳೇಯ ಕೋವಿಗಳ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕಕ್ಕಬ್ಬೆ ಸಮೀಪದ ನಾಲಡಿ ಗ್ರಾಮದ ಕೆ.ಸಿ.ಅಶೋಕ್ ಎಂಬಾತನೆ ಬಂಧಿತ ಆರೋಪಿಯಾಗಿದ್ದು, ಈತನೊಂದಿಗೆ ವಿವಿಧ ಕೃತ್ಯಗಳಲ್ಲಿ ಭಾಗಿಗಳಾಗಿದ್ದ ನಾಲ್ಕು ಮಂದಿಯನ್ನು ಈ ಹಿಂದೆಯೇ ಬಂಧಿಸಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ.ಸುಮನ್ ಪನ್ನೇಕರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ನಿವೃತ್ತ ಸೇನಾಧಿಕಾರಿ ಕೆ.ಜಿ.ಉತ್ತಯ್ಯ ಅವರು ಮಾರ್ಚ್ ೮ ರಂದು ಮಧ್ಯಾಹ್ನದ ವೇಳೆ ನಗರಕ್ಕೆ ತೆರಳಿದ್ದಾಗ ಮನೆಯ ಬಾಗಿಲ ಬೀಗ ಮುರಿದ ಚೋರರು ೧ ಲಕ್ಷ ರೂ. ಮೌಲ್ಯದ ಫ್ರೆಂಚ್ ಮೇಡ್ ಒಂಟಿ ನಳಿಕೆಯ ಕೋವಿ ಹಾಗೂ ೧.೫೦ ಲಕ್ಷ ರೂ. ಮೌಲ್ಯದ ಲಂಡನ್ ಕಂಪೆನಿಯ ಕೋವಿಯನ್ನು ಕದ್ದೊಯ್ದಿದ್ದರು.
ಈ ಬಗ್ಗೆ ಉತ್ತಯ್ಯ ಅವರು ನೀಡಿದ ದೂರನ್ನು ಆಧರಿಸಿ ಪೊಲೀಸರು ತನಿಖಾ ಕಾರ್ಯ ನಡೆಸಿ ಆರೋಪಿಯನ್ನು ಬಂಧಿಸಿ, ಮಾಲನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಎಸ್‌ಪಿ ಡಾ.ಸುಮನ್ ಪೊನ್ನೇಕರ್ ನಿರ್ದೇಶನದಂತೆ, ಡಿವೈಎಸ್‌ಪಿ ಸುಂದರರಾಜ್ ಮಾರ್ಗದರ್ಶನದಲ್ಲಿ ನಗರ ವೃತ್ತ ನಿರೀಕ್ಷಕ ಎನ್.ಸಿ. ನಾಗೇಗೌಡ, ನಾಪೋಕ್ಲು ಠಾಣಾಧಿಕಾರಿ ರೇಣುಕಾ ಪ್ರಸಾದ್, ಪಿ.ಎಸ್.ಐ ಕುಶಾಲಪ್ಪ, ಸಿಬ್ಬಂದಿಗಳಾದ ಫ್ರಾನ್ಸಿಸ್ ಕೆ.ಜೆ., ಮಹೇಶ್, ನವೀನ್, ಮಡಿಕೇರಿ ನಗರ ಠಾಣೆಯ ಕೆ.ಕೆ. ದಿನೇಶ್, ನಾಗರಾಜ್ ಎಸ್. ಕಡಗಣ್ಣವರ್, ಡಿಸಿಐಬಿಯ ಯೋಗೇಶ್, ನಿರಂಜನ್ ಪಾಲ್ಗೊಂಡಿದ್ದರು.

No comments

Post a Comment