ಕ್ರಾಫ್ಟ್ ಮೇಳದಲ್ಲಿ ಗಮನಸೆಳೆದ ಕುಚಿಪುಡಿ ನೃತ್ಯವೈಭವ..

No comments

ಕ್ರಾಫ್ಟ್ ಮೇಳದಲ್ಲಿ ಕಂಗೊಳಿಸಿದ ಕುಚಿಪುಡಿ ನೃತ್ಯವೈಭವ
ಮಡಿಕೇರಿ. ಏ.೧ :  ಹೆಸರಾಂತ ನೃತ್ಯಪಟು ವೈಜಯಂತಿಕಾಶಿ ಮತ್ತು ಪ್ರತಿಕ್ಷಾ ಕಾಶಿ ಅವರ ಕುಚಿಪುಡಿ ನೃತ್ಯವೈವಿಧ್ಯ ಕ್ರಾಫ್ಟ್ ಮೇಳದ ಅಂಗವಾಗಿನ ಸಾಂಸ್ಕೃತಿಕ ಕಾಯ೯ಕ್ರಮದ ಎರಡನೇ ದಿನ ಪ್ರೇಕ್ಷಕರ ಮನಸೆಳೆಯಿತು.
ಜಯಜಯ ಗಜಮುಖ ಎಂಬ ಗಣೇಶ ಸ್ತುತಿನೃತ್ಯದಿಂದ ಪ್ರಾರಂಭಗೊಂಡ ವೈಜಯಂತಿಕಾಶಿ ಅವರ ನೃತ್ಯ, ನಂತರ ಶ್ರೀಕೃಷ್ಣನಿಂದ ಪುತಾನಿ ಸಂಹಾರದ ಪುತನಿ ಪ್ರವೇಶ ಎಂಬ ನೃತ್ಯದ ಮೂಲಕ ಪ್ರೇಕ್ಷಕರನ್ನು ನೃತ್ಯಲೋಕದಲ್ಲಿ ತೇಲಿಸಿತು. ಕಂಸನ ಆಜ್ಞೆ ಪಾಲಿಸಲು ಪುತನಿ ಶ್ರೀಕೃಷ್ಣನ ವಧೆಗೆ ಬಂದು ತಾನೇ ಕೊನೆಯುಸಿರೆಳೆಯುವ ದೃಶ್ಯವನ್ನು ವೈಜಯಂತಿ ಕಾಶಿ ಏಕವ್ಯಕ್ತಿ ನೃತ್ಯದ ಮೂಲಕ ವೇದಿಕೆಯಲ್ಲಿ ಪ್ರದಶಿ೯ಸಿದರು.
ಶ್ರೀ ಕೃಷ್ಣನ ವಣ೯ನೆಯ ನೀಲಮೇಘಶ್ಯಾಮ ಎಂಬ ನೃತ್ಯವೂ ವೈಜಯಂತಿಕಾಶಿ ಮತ್ತು ಪುತ್ರಿ ಪ್ರತಿಕ್ಷಾ ಕಾಶಿ ಅವರಿಂದ ಮನಮೋಹಕವಾಗಿ ಮೂಡಿಬಂತು. ಹರಿವಾಣದ ಮೇಲೆ ನಿಂತುಕೊಂಡು ರೋಮಾಂಚಕಾರಿಯಾಗಿ ಈ ನೃತ್ಯವನ್ನು ಪ್ರದಶಿ೯ಸಲಾಯಿತು.
ವೈಜಯಂತಿಕಾಶಿ ಹಾಗೂ ಪ್ರತಿಕ್ಷಾ ಕಾಶಿ ಪ್ರಸ್ತುತಿಯಲ್ಲಿ ಉಗ್ರನರಸಿಂಹಾವತಾರ ನ?ತ್ಯವೂ ಮನ ಸೆಳೆಯಿತು. ಒಂದೂವರೆ ಗಂಟೆ ಕಾಲ ನ?ತ್ಯವೈವಿಧ್ಯದ ಮೂಲಕ ಹೆಸರಾಂತ ನೃತ್ಯಗಾತಿಯರು ಕಲಾಪ್ರೇಮಿಗಳ ಮನ ತಣಿಸುವಲ್ಲಿ ಯಶಸ್ವಿಯಾದರು.
ವಿದೂಷಿ ರಮ್ಯ ಸೂರಜ್ ಹಿಮ್ಮೇಳದಲ್ಲಿ ಗಾಯಕಿಯಾಗಿದ್ದರೆ, ೨೦೧೭ ರಲ್ಲಿ ಸಂಗೀತ ಅಕಾಡೆಮಿಯ ಪ್ರಶಸ್ತಿಗೆ ಭಾಜನರಾದ ವಿದ್ವಾನ್ ಜಿ.ಎಸ್.ನಾಗರಾಜ್ ಅವರಿಂದ ಮ?ದಂಗ, ಕೊಳಲಿನಲ್ಲಿ ರಾಕೇಶ್ ದೀಕ್ಷಿತ್ ತಮ್ಮ ಪ್ರತಿಭೆ ತೋರಿದರು.
ಈ ಸಂದಭ೯ ಮಾತನಾಡಿದ ವೈಜಯಂತಿ ಕಾಶಿ, ಆಂಧ್ರದ ಕೂಚಿಪುಡಿ ಎಂಬ ಗ್ರಾಮದಲ್ಲಿ ಉಗಮಿಸಿದ ಭಾರತೀಯ ಶಾಸ್ತ್ರೀಯ ನೃತ್ಯರೂಪಕವಾದ ಕೂಚಿಪುಡಿ, ಧಾಮಿ೯ಕತೆ ಬಿಂಬಿಸುವ ಕಲಾಪ್ರಕಾರವಾಗಿ ದೇವಾಲಯಗಳಲ್ಲಿ ಪ್ರದಶಿ೯ತವಾಗುವ ದೈವಿ ಕಲೆಯಾಗಿದೆ ಎಂದರು.
ಮಡಿಕೇರಿಯಲ್ಲಿ ೧೦೦ ಕ್ಕೂ ಅಧಿಕ ಮಕ್ಕಳಿಗೆ ಕುಚಿಪುಡಿ ನೃತ್ಯಪ್ರಕಾರದ ಮೂಲ ಅಂಶಗಳನ್ನು ಕ್ರಾಫ್ಟ್ ಮೇಳದ ಮೂಲಕ ತಿಳಿಹೇಳುವ ಅವಕಾಶ ದೊರಕಿದ್ದು ತನ್ನ ಭಾಗ್ಯ ಎಂದೂ ವೈಜಯಂತಿ ಕಾಶಿ ಹೆಮ್ಮೆಯಿಂದ ಪ್ರತಿಕ್ರಿಯಿಸಿದರು.
ಹೆಸರಾಂತ ಕಲಾವಿದ ಗುಬ್ಬಿ ವೀರಣ್ಣ ವಂಶದ ಕಲಾವಿದೆಯಾಗಿರುವ ವೈಜಯಂತಿಕಾಶಿ, ನ?ತ್ಯಪಟುವಾಗಿ ಖ್ಯಾತರಾಗಿರುವುದಲ್ಲದೇ ನ?ತ್ಯಕಲೆಗೆ ಸಂಬಂಧಿಸಿದಂತೆ ಬೋಧನೆ,ನಟನೆ,ಸಂಶೋಧನೆಯಲ್ಲಿಯೂ ಸಕ್ರಿಯರಾಗಿದ್ದಾರೆ. ೧೮ ದೇಶಗಳಲ್ಲಿ ನೃತ್ಯಪ್ರದಶ೯ನ ನೀಡಿರುವ ವೈಜಯಂತಿಕಾಶಿ, ಬೆಂಗಳೂರಿನಲ್ಲಿ ಶಾಂಭವಿ ನೃತ್ಯಶಾಲೆಯನ್ನೂ ಸ್ಥಾಪಿಸಿದ್ದಾರೆ. ಕೇಂದ್ರ ಸಕಾ೯ರದ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಕನಾ೯ಟಕ ರಾಜ್ಯೋತ್ಸವ ಪ್ರಶಸ್ತಿ ಪಡೆದಿದ್ದಾರೆ. ಕನಾ೯ಟಕ ಸಂಗೀತ ನಾಟಕ ಅಕಾಡೆಮಿಯ ಅಧ್ಯಕ್ಷೆಯಾಗಿಯೂ ವೈಜಯಂತಿ ಕಾಶಿ ಕಾಯ೯ನಿವ೯ಹಿಸಿದ್ದಾರೆ.
ವೈಜಯಂತಿ ಕಾಶಿ ಅವರ ಪುತ್ರಿಯಾದ ಪ್ರತಿಕ್ಷಾ ಕಾಶಿ, ಕಂಪ್ಯೂಟರ್ ಇಂಜಿನಿಯರಿಂಗ್ ಪದವೀಧರೆಯಾಗಿದ್ದು, ಯುವಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ೩೭ ನೇ ಅಂತರರಾಷ್ಟ್ರೀಯ ಆಯ೯ಭಟ ಪ್ರಶಸ್ತಿಗೂ ಪ್ರತಿಕ್ಷಾ ಭಾಜನರಾಗಿದ್ದು, ನಳಂಧ ನೃತ್ಯ, ನೃತ್ಯಜ್ಯೋತಿ ಬಿರುದಿಗೂ ಭಾಜನರಾಗಿದ್ದಾರೆ. ಪ್ರಕೃತ್ತಿ ಚಿತ್ರದಲ್ಲಿನ ನಟನೆಗಾಗಿ ರಾಷ್ಟ್ರಪ್ರಶಸ್ತಿ ಗಳಿಸಿರುವ ಪ್ರತಿಕ್ಷಾ, ನೃತ್ಯತರಬೇತಿ ಮೂಲಕವೂ ಯುವಪೀಳಿಗೆಗೆ ಭಾರತೀಯ ಸಂಸ್ಕೃತಿ, ಕಲಾ ತರಬೇತಿ ನೀಡುತ್ತಿದ್ದಾರೆ.

No comments

Post a Comment