ಜೆ.ಎ.ಕರುಂಬಯ್ಯ ನಿಧನಕ್ಕೆ ಜಿಲ್ಲಾ ಕಾಂಗ್ರೆಸ್ ಸಂತಾಪ
ಮಡಿಕೇರಿ ಏ.1 :
ಹಿರಿಯ ರಾಜಕಾರಣಿ ಜೆ.ಎ.ಕರುಂಬಯ್ಯ ಅವರ ನಿಧನಕ್ಕೆ ಜಿಲ್ಲಾ ಕಾಂಗ್ರೆಸ್ ಸಮಿತಿ ತೀವ್ರ ಸಂತಾಪ ಸೂಚಿಸಿದೆ.
ಜಿಲ್ಲೆಯ ಹಿರಿಯ ರಾಜಕೀಯ ಮುತ್ಸದ್ಧಿ, ದಕ್ಷ ಆಡಳಿತಗಾರ, ಜಿಲ್ಲಾ ಕಾಂಗ್ರೆಸ್ ನ ಆಧಾರ ಸ್ತಂಭ, ಜಿಲ್ಲಾ ಪರಿಷತ್ತಿನ ಮಾಜಿ ಅಧ್ಯಕ್ಷ ಜಮ್ಮಡ ಕರುಂಬಯ್ಯ ಅವರ ಅಗಲಿಕೆ ಜಿಲ್ಲೆಗೆ ತುಂಬಲಾರದ ನಷ್ಟವಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಕೆ.ಮಂಜುನಾಥ್ ಕುಮಾರ್ ವಿಷಾದಿಸಿದ್ದಾರೆ.
ಮೃತರ ನಿವಾಸಕ್ಕೆ ಭೇಟಿ ನೀಡಿದ್ದ ಕಾಂಗ್ರೆಸ್ ನಾಯಕರು ನೋವನ್ನು ಸಹಿಸುವ ಶಕ್ತಿಯನ್ನು ಅವರ ಕುಟುಂಬ ವರ್ಗದವರಿಗೂ, ಅಭಿಮಾನಿ ಬಳಗದವರಿಗೂ ಭಗವಂತ ನೀಡಲಿ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯರಾದ ವೀಣಾಅಚ್ಚಯ್ಯ, ಲೋಕಸಭಾ ಮೈತ್ರಿ ಅಭ್ಯರ್ಥಿ ಸಿ.ಹೆಚ್.ವಿಜಯಶಂಕರ್, ಕೆಪಿಸಿಸಿ ಸದಸ್ಯರಾದ ಕೆ.ಪಿ.ಚಂದ್ರಕಲಾ, ಟಿ.ಪಿ.ರಮೇಶ್, ಹಿರಿಯ ಉಪಾಧ್ಯಕ್ಷ ಮಿಟ್ಟುಚಂಗಪ್ಪ, ಕಾರ್ಯದರ್ಶಿ ಟಿ.ಎಂ.ಶಾಹಿದ್, ಪ್ರಮುಖರಾದ ಸಿ.ಎಸ್.ಅರುಣ್ ಮಾಚಯ್ಯ, ಎಂ.ಸಿ.ನಾಣಯ್ಯ, ಯುವ ಕಾಂಗ್ರೆಸ್ ಅಧ್ಯಕ್ಷÀ ಹನೀಫ್ ಸಂಪಾಜೆ, ಜಿ.ಪಂ ಸದಸ್ಯೆ ಸುನಿತಾ ಮಂಜುನಾಥ್, ಲೀಲಾವತಿ, ಬ್ಲಾಕ್ ಅಧ್ಯಕ್ಷರುಗಳಾದ ಶಶಿಧರ್, ಧರ್ಮಜ ಉತ್ತಪ್ಪ, ಸಲಾಂ, ಬಿ.ಎಸ್.ರಮಾನಾಥ್ ಅಪ್ರು ರವೀಂದ್ರ, ಪಕ್ಷದ ವಕ್ತಾರರಾದ ಸುರೇಶ್, ಟಾಟು ಮೊಣ್ಣಪ್ಪ, ನೆರವಂಡ ಉಮೇಶ್, ಮುನೀರ್, ಪ್ರಧಾನ ಕಾರ್ಯದರ್ಶಿ ವಿ.ಪಿ.ಸುರೇಶ್, ನಟೇಶ್ ಗೌಡ ಮತ್ತಿತರ ಮುಖಂಡರು ಸಂತಾಪ ಸೂಚಿಸಿದ್ದಾರೆ.
No comments
Post a Comment